Skip to main content


ದೀಪಿಕಾ ರಣವೀರ್ ರವರನ್ನು ಇಷ್ಟಪಟ್ಟಿದ್ದು ಅವರ ಈ ಗುಣಗಳನ್ನು ನೋಡಿಯಂತೆ

ಗಂಡು ಹೆಣ್ಣು ಒಬ್ಬರನೊಬ್ಬರು ಇಷ್ಟಪಡಲು ಹಲವು ಕಾರಣಗಳಿರುತ್ತವೆ. ಅದೇರೀತಿ ಬಾಲಿವುಡ್ ನ ಪ್ರಣಯ ಪಕ್ಷಿಗಳಾದ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ ವೀರ್ ಸಿಂಗ್ ಅವರು ಒಬ್ಬರನೊಬ್ಬರು ಇಷ್ಟಪಡಲು ಕಾರಣವೆನಿರಬಹುದು ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇದೆ.  2013 ರ ರಾಮ್ ಲೀಲಾ ಚಿತ್ರದ ನಂತರ ಇವರಿಬ್ಬರ ನಡುವೆ ಲವ್ವಿ-ಡುವ್ವಿ ಶುರುವಾಗಿತ್ತು.  ಇವರು ಹಲವು ಬಾರಿ ಕೈ ಕೈ ಹಿಡಿದುಕೊಂಡೆ ಸಾಗುವ ದೃಶ್ಯ ಮಾಧ್ಯಮದಲ್ಲೂ ಕೂಡ ಸೆರೆಯಾಗಿತ್ತು.
'ನಾನು ರಣ್ ವೀರ್ ನನ್ನು ಪ್ರೀತಿಸಲು ಅವರ ಎನರ್ಜಿಯೇ ಕಾರಣ ಎನ್ನುವ ಜನರ ಮಾತಿನಿಂದ ನಿಜಕ್ಕೂ ಬೋರ್ ಆಗಿ ಹೋಗಿದೆ. ನಾನು ರಣ್ ವೀರ್ ನನ್ನು ಇಷ್ಟಪಡಲು ಹಲವು ಕಾರಣಗಳಿವೆ. ಅದರಲ್ಲಿ ಅವನೊಬ್ಬ ಅದ್ಬುತ ಹ್ಯೂಮನ್ ಬಿಯಿಂಗ್ ಎಂಬುದು ಕೂಡ ಅಷ್ಟೇ ಮುಖ್ಯ. ಅವರು ಎಷ್ಟು ನೈಜವಾಗಿರುತ್ತಾರೆ ಎಂದರೆ, ಅವರು ಸೆನ್ಸಿಟೀವ್ ಹಾಗೂ ಎಮೋಷನಲ್ ಕೂಡ. ಅಳು ಬಂದಾಗ ಆತ ಅಳೋದಿಕ್ಕೂ ಹಿಂಜರಿಯುವುದಿಲ್ಲ. ಇದನ್ನೆ ನಾನು ರಣ್ ವೀರ್ ನಲ್ಲಿ ಇಷ್ಟಪಡುವುದು. ಇದೇ ಕಾರಣಕ್ಕೆ ನನಗೆ ರಣ್ ವೀರ್ ಎಂದರೆ ವಿಶೇಷ ಗೌರವ' ಎಂದು ದೀಪಿಕಾ ಹೇಳಿಕೊಂಡಿದ್ದಾರೆ.

short by : Nithin / more at Webdunia

Comments