Skip to main content


ಕಚ್ಚಾತೈಲಗಳ ಬೆಲೆಏರಿಕೆ ಮುಂದುವರಿದರೆ ಭಾರತೀಯ ಆರ್ಥಿಕತೆಗೆ ಹೆಚ್ಚಿನ ಅಪಾಯ

ಜಾಗತಿಕ ಕಚ್ಚಾತೈಲಗಳ ಬೆಲೆಗಳಲ್ಲಿಯ ಹೆಚ್ಚಳ ಸುದೀರ್ಘ ಅವಧಿಗೆ ಮುಂದುವರಿಯುವ ಬಲವಾದ ಸಾಧ್ಯತೆಯಿದ್ದು,ಇದು ಭಾರತದ ಆರ್ಥಿಕತೆಗೆ ಹೊಡೆತ ನೀಡುವ ಮತ್ತು ಹಣದುಬ್ಬರವನ್ನು ಹೆಚ್ಚಿಸುವ ಬೆದರಿಕೆಯನ್ನುಂಟು ಮಾಡಿದೆ. ಸರಕಾರವು ಯಾವುದೇ ನೀತಿಯನ್ನು ರೂಪಿಸುವ ಮುನ್ನ ಕಚ್ಚಾತೈಲ ಬೆಲೆಗಳ ಮೇಲೆ ನಿಗಾ ಇರಿಸಬೇಕಾಗುತ್ತದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಯೋರ್ವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಬ್ರೆಂಟ್ ಕಚ್ಚಾತೈಲದ ಬೆಲೆ ಬುಧವಾರ ಶೇ.3.1ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 77.20 ಡಾ.ಗೆ ತಲುಪಿದ್ದು,ಇದು 2014, ನವೆಂಬರ್‌ನಿಂದೀಚಿಗೆ ಸರ್ವಾಧಿಕ ವಾಗಿದೆ. ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ 78 ಡಾ.ಗೆ ತಲುಪಿದರೆ 2018-19ನೇ ಸಾಲಿಗೆ ಅಂದಾಜಿಲಾಗಿರುವ ಶೇ.7.4 ಜಿಡಿಪಿ ಬೆಳವಣಿಗೆ ದರವು 10 ಮೂಲ ಅಂಕಗಳನ್ನು ಕಳೆದುಕೊಳ್ಳಲಿದೆ ಎಂದು ಆರ್‌ಬಿಐ ಲೆಕ್ಕ ಹಾಕಿದೆ.    

short by Pawan / more at Varthabharathi

Comments