Skip to main content


ಐಪಿಎಲ್ ದುಬಾರಿ ಆಟಗಾರರಿಂದ ಕಳಪೆ ಪ್ರದರ್ಶನ

ಹನ್ನೊಂದನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲಾರ್ಧದ ಪಂದ್ಯಗಳು ಕೊನೆಗೊಂಡಿದ್ದು, ಈ ವರ್ಷ ಭಾರೀ ಮೊತ್ತಕ್ಕೆ ಹರಾಜಾಗಿ ಗಮನ ಸೆಳೆದಿರುವ ಆಟಗಾರರು ತಮ್ಮ ಮೊತ್ತಕ್ಕೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. ಶಾರ್ಟ್(4 ಪಂದ್ಯಗಳು, 65 ರನ್, 97.01 ಸ್ಟ್ರೈಕ್‌ರೇಟ್) 2017-18ರ ಬಿಗ್ ಬಾಶ್ ಲೀಗ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಶಾರ್ಟ್ ತನ್ನ ಮೂಲ ಬೆಲೆಗಿಂತ 20 ಪಟ್ಟು ಹೆಚ್ಚಿನ ವೌಲ್ಯಕ್ಕೆ(4 ಕೋ.ರೂ.) ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದರು. ಗ್ಲೆನ್ ಮ್ಯಾಕ್ಸ್‌ವೆಲ್(7 ಪಂದ್ಯಗಳು, 126 ರನ್) ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 9 ಕೋ.ರೂ.ಗೆ ಹರಾಜಾಗಿದ್ದ ಮ್ಯಾಕ್ಸ್ ವೆಲ್ ಡೆಲ್ಲಿ ತಂಡದ ದುಬಾರಿ ಆಟಗಾರನಾಗಿದ್ದರು. ಜಯದೇವ್ ಉನದ್ಕಟ್(7 ಪಂದ್ಯಗಳು, 4 ವಿಕೆಟ್‌ಗಳು)ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತದ ಓರ್ವ ಕೌಶಲ್ಯಭರಿತ ವೇಗದ ಬೌಲರ್ ಎನಿಸಿ ಕೊಂಡಿರುವ ಜಯದೇವ್ ಉನದ್ಕಟ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ 11.5 ಕೋ.ರೂ.ಗೆ ಹರಾಜಾಗುವ ಮೂಲಕ ಗಮನ ಸೆಳೆದಿದ್ದರು. ಕಿರೊನ್ ಪೊಲಾರ್ಡ್(7 ಪಂದ್ಯಗಳು, 76 ರನ್) ಈ ಬಾರಿ 5.40 ಕೋ.ರೂ.ಗೆ ರೈಟ್ ಟು ಮ್ಯಾಚ್ ಕಾರ್ಡ್ ಮೂಲಕ ಮುಂಬೈ ತಂಡಕ್ಕೆ ವಾಪಸಾಗಿರುವ ಪೊಲಾರ್ಡ್ ಈ ತನಕ 28,0,5,ಔಟಾಗದೆ 21,9 ಹಾಗೂ 13 ರನ್ ಗಳಿಸಿದ್ದಾರೆ. ಆ್ಯರೊನ್ ಫಿಂಚ್(6 ಪಂದ್ಯಗಳು, 24 ರನ್) ಆಸ್ಟ್ರೇಲಿಯದ ಸೀಮಿತ ಓವರ್ ಕ್ರಿಕೆಟ್‌ನ ಆರಂಭಿಕ ಆಟಗಾರನಾಗಿರುವ ಫಿಂಚ್ 1.5 ಕೋ.ರೂ. ಮೂಲ ಬೆಲೆ ಹೊಂದಿದ್ದರು. ಅಂತಿಮವಾಗಿ 6.2 ಕೋ.ರೂ.ಗೆ ಪಂಜಾಬ್ ತಂಡಕ್ಕೆ ಹರಾಜಾಗಿದ್ದರು.  

short by Prajwal / more at varthabharathi

Comments