Skip to main content


ದುಶ್ಚಟಗಳಿಗೆ ದಾಸರಾಗಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ..

ಇಂದಿನ ಯುವ ಜನಾಂಗ ಕುಡಿತ, ಸಿಗರೇಟು, ತಂಬಾಕು ಸೇವನೆ ಸೇರಿದಂತೆ ಹಲವು ದುಶ್ಚಟಗಳ ದಾಸರಾಗಿ ಪರಿತಪಿಸುತ್ತಿದೆ. ಮೊದಲು ಶೋಕಿಗೆಂದು ಆರಂಭವಾಗುವ ಈ ಚಟಗಳು ಬಳಿಕ ಅದರಿಂದ ಹೊರ ಬಾರದಂತೆ ಆಕ್ರಮಿಸಿಕೊಳ್ಳುತ್ತವೆ. ಇದರಿಂದಾಗಿ ಆರೋಗ್ಯ, ಮಾನಸಿಕ ಸ್ಥಿತಿಗತಿಗಳು ಹಾಳಾಗುತ್ತದಲ್ಲದೇ ಆರ್ಥಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಯಾವುದೇ ಒಂದು ದುಶ್ಚಟದಿಂದ ಹೊರ ಬರಲು ದೃಢ ನಿರ್ಧಾರ ಬಹು ಮುಖ್ಯವಾಗುತ್ತದೆ. ಈ ದುಶ್ಚಟಗಳಿಂದ ಆಗುತ್ತಿರುವ ಹಾನಿ ಕುರಿತು ಸಮಾಧಾನಚಿತ್ತವಾಗಿ ಕುಳಿತು ಯೋಚಿಸಿ ಬಳಿಕ ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಚಟವನ್ನು ತ್ಯಜಿಸಲು ತೆಗೆದುಕೊಂಡಿರುವ ನಿರ್ಧಾರದ ಕುರಿತು ಅತ್ಮೀಯರಾಗಿರುವವರೊಂದಿಗೆ ಹೇಳಿಕೊಂಡರೆ ಉತ್ತಮ. ಒಂದೊಮ್ಮೆ ಮತ್ತೆ ಆ ಚಟ ಮಾಡುವ ವೇಳೆ ಅವರು ಗಮನಿಸಿಯಾರೆಂಬ ಅಳುಕಿಗಾದರೂ ಅದನ್ನು ತ್ಯಜಿಸುತ್ತಾರೆ. ದುಶ್ಚಟ ತ್ಯಜಿಸಿದ ಬಳಿಕ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಮುಖ್ಯವಾಗುತ್ತದೆ. ಪುಸ್ತಕ ಓದುವುದು, ಸಂಗೀತ ಕೇಳುವುದು, ಧ್ಯಾನ, ಯೋಗ ಮೊದಲಾದ ಕಡೆ ಗಮನ ಹರಿಸುವುದು ಸೂಕ್ತ.     

short by Pawan / more at Kannadadunia

Comments