Skip to main content


ಹ್ಯಾರಿ, ಮೆಘನ್‌ ಅದ್ಧೂರಿ ವಿವಾಹ!!

ಬ್ರಿಟನ್‌ ರಾಜಕುಮಾರ- ಅಮೆರಿಕದ ನಟಿ ಮೆಘನ್‌ ಮರ್ಕೆಲ್‌ ಅವರ ವಿವಾಹ ಇಲ್ಲಿನ ವಿಂಡ್ಸರ್‌ ಕ್ಯಾಸಲ್‌ ಪ್ರಾಂತ್ಯದಲ್ಲಿನ ಸೇಂಟ್‌ ಜಾರ್ಜ್‌ ಚಾಪೆಲ್‌ ಚರ್ಚ್‌ನಲ್ಲಿ ವಿಜೃಂಭಣೆಯಿಂದ ನೆರವೇರಿತು. ಈ ವಿವಾಹಕ್ಕೆ ರಾಜ ಮನೆತನದವರಾದ ರಾಣಿ ಎಲಿಜಬೆತ್‌, ಪ್ರಿನ್ಸ್‌ ಫಿಲಿಪ್‌, ಪ್ರಿನ್ಸ್‌ ವಿಲಿಯಮ್ಸ್‌ ಹಾಗೂ ಅವರ ಪತ್ನಿ ಕೇಟ್‌, ವಿಲಿಯಮ್ಸ್‌ ಪುತ್ರ 4 ವರ್ಷದ ಜಾರ್ಜ್‌ ಹಾಗೂ 3 ವರ್ಷದ ಚಾರ್ಲೆಟ್‌ ಸೇರಿದಂತೆ ಹಲವಾರು ಗಣ್ಯಾತಿ ಗಣ್ಯರು ಹಾಜರಿದ್ದರು.

ಘೋಷಣೆ ಹೊರಬೀಳುತ್ತಿದ್ದಂತೆ ಜೋಡಿಯು ತಡ ಮಾಡದೇ ಪರಸ್ಪರ ತುಟಿಗಳಿಗೆ ಮುತ್ತಿಕ್ಕಿದರು. ಸಭಾಂಗಣದಲ್ಲಿದ್ದ ಎಲ್ಲಾ ಗಣ್ಯರು ಚಪ್ಪಾಳೆ ತಟ್ಟುತ್ತಾ ಶುಭಾಶಯ ಸಲ್ಲಿಸಿದರು. ಅಲ್ಲಿಗೆ, ಹ್ಯಾರಿ, ಮೆಘನ್‌ ನಡು ವಿನ ಪ್ರೇಮಕ್ಕೆ ವಿವಾಹದ ಮುದ್ರೆ ಬಿತ್ತು. ನಂತರ, ಚರ್ಚ್‌ನಿಂದ ಹೊರ ಬಂದ ಜೋಡಿ, ಸಾಂಪ್ರದಾಯಿಕ ವಾಹನದಲ್ಲಿ ತೆರಳಿತು. ವಿವಾಹ ಮುಗಿದ ನಂತರ, ಮಹಾರಾಣಿ 2ನೇ ಎಲಿಜಬೆತ್‌, ತಮ್ಮ ಮೊಮ್ಮಗ ಪ್ರಿನ್ಸ್‌ ಹ್ಯಾರಿ ಮತ್ತು ಮೆಘ ನ್‌ಗೆ ಕ್ರಮವಾಗಿ "ಡ್ನೂಕ್‌ ಆಫ್ ಸಸ್ಸೆಕ್ಸ್‌', "ದ ಡಚೆಸ್‌ ಆಫ್ ಸಸ್ಸೆಕ್ಸ್‌' ಎಂಬ ಸಾಂಪ್ರದಾಯಿಕ ಬಿರುದುಗಳನ್ನು ನೀಡಿದ್ದಾರೆ.

Short by Sp!


Comments