Skip to main content


ಅತ್ತಿಗೆಗೆ ಜೈ ಎಂದ ಧ್ರುವ ಸರ್ಜಾ

ಇದು ನನ್ನ ಅತ್ತಿಗೆ ಸಿನಿಮಾ.  ಚೆನ್ನಾಗಿ ಬಂದಿರುತ್ತದೆ. ದಯವಿಟ್ಟು ಎಲ್ಲರು ಚಿತ್ರವನ್ನು ನೋಡಿ ಬೆಂಬಲಿಸಿ.
ನನ್ನ ಪತ್ನಿ ನಟಿಸಿರುವ ಸಿನಿಮಾ. ಇಡೀ ತಂಡಕ್ಕೆ ಒಳ್ಳೆಯದಾಗಲಿ.  ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುವಂತಾಗಲಿ. ಹೀಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಫ್ಯಾಮಿಲಿ ಮಾತುಗಳು ಕೇಳಿಬಂದಿದ್ದು 'ಇರುವುದೆಲ್ಲ ಬಿಟ್ಟು' ಚಿತ್ರದ ಆಡಿಯೋ ಬಿಡುಗಡೆ ವೇದಿಕೆಯಲ್ಲಿ.  ಫ್ಯಾಮಿಲಿ ಕಾರ್ಯಕ್ರಮ ಆಗುವುದಕ್ಕೆ ಕಾರಣವಾಗಿದ್ದು ಮೇಘನಾ ರಾಜ್. ಮದುವೆಯ ನಂತರ ಭಾಗಹಿಸಿದ ಮೊದಲ ಸಿನಿಮಾ ಕಾರ್ಯಕ್ರಮ.  ಹೀಗಾಗಿ ಅವರ ಪತಿ ಚಿರಂಜೀವಿ ಸರ್ಜಾ ಮತ್ತು ಮೈದುನ ಧ್ರುವ ಸರ್ಜಾ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಚಿತ್ರವನ್ನು ಬೆಂಬಲಿಸಿ ಎಂದಾಗ ಎದುರಿಗೆ ಕೂತ ಸುಂದರಾಜ್ ಹಾಗೂ ಪ್ರಮೀಳಾ ಜೋಷಾಯಿ ದಂಪತಿ ಮುಖದಲ್ಲಿ ಸಂಭ್ರಮದಲ್ಲಿ ಮನೆ ಮಾಡಿತ್ತು.  ಇಡೀ ಕಾರ್ಯಕ್ರಮ ಜನ ಜಾತ್ರೆಗೆ ಕಾರಣವಾಗಿದ್ದು ಧ್ರುವ ಸರ್ಜಾ ಆಗಮನ. ಧ್ರುವ ಜತೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಒದ್ದಾಡುತ್ತಿದ್ದವರ ಸಂಖ್ಯೆಗೂ ಕಡಿಮೆ ಇರಲಿಲ್ಲ.

short by Nithin / more at Suvarnanews

Comments