Skip to main content


ಧೃವ ಸರ್ಜಾ ಅವರ ಮೊದಲ ಸಂಭಾವನೆ ಎಷ್ಟು ಗೊತ್ತಾ..?

ಯಾರಿಗೇ ಆದ್ರೂ ನಮ್ಮ ಕೆಲಸಕ್ಕೆ ಪಡೆವ ಸಂಭಾವನೆ ಎಷ್ಟು ಮುಖ್ಯ ಅದರಲ್ಲೂ ಮೊದಲ ಸಂಭಾವನೆ ಅಂದ್ರೆ ಎಂಥವರಿಗೂ ಒಂದು ಕನಸು ಇದ್ದೇ ಇರುತ್ತದೆ. ಯಾಕಂದ್ರೆ ಯಾವುದೇ ಸಂಭಾವನೆ ಮೊದಲು ಪಡೆದು ಅದರಲ್ಲಿ ಮನೆಯವರಿಗೆ ಏನು ನೀಡಬೇಕು ಹಾಗೂ ತಮಗೆ ಇಷ್ಟವಾದವರಿಗೆ ಏನು ನೀಡಬೇಕು ಎಂಬುದು ಕೆಲಸಕ್ಕೆ ಹೋದ ಮೊದಲ ದಿನವೇ ತೀರ್ಮಾನ ಮಾಡಿರುತ್ತೇವೆ. ಹೌದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕನ್ನಡದ ಬಹುಬೇಡಿಕೆಯ ನಟ. ಅದ್ಧೂರಿ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಇವರು ಒಂದೇ ಸಿನಿಮಾದಲ್ಲಿ ಪ್ರೇಕ್ಷಕರ ಮನ ಗೆದ್ದು ನಂತರ 'ಬಹುದ್ದೂರ್' ಮತ್ತು 'ಭರ್ಜರಿ' ಚಿತ್ರಗಳ ನಂತರ ಹ್ಯಾಟ್ರಿಕ್ ಬಾರಿಸಿ ಬಾಕ್ಸ್ ಆಫೀಸ್ ನಲ್ಲಿ ಹೊಸ ಅಧಿಪತ್ಯ ಸ್ಥಾಪನೆ ಮಾಡಿಕೊಂಡರು. ಇದರ ಪರಿಣಾಮ ಧ್ರುವ ಸರ್ಜಾ ಸಿನಿಮಾಗಳಿಗೆ ಈಗ ಕೋಟಿಗಟ್ಟಲೆ ಬೇಡಿಕೆ ಇದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ೫೦ ಸಾವಿರದ ಒಂದು ರೂಪಾಯಿ. ಇದು ಸುಮಾರು ಆರೇಳು ವರ್ಷಗಳ ಹಿಂದೆ. ಧ್ರುವ ಸರ್ಜಾ ಅವರಿಗೆ ಸಿಕ್ಕ ಮೊದಲ ಸಂಭಾವನೆ ಐದು ನಿಮಿಷದಲ್ಲಿ ಖರ್ಚಾಯಿತು. ಧ್ರುವ ತಮ್ಮ ತಂದೆಗೆ ೫ ಸಾವಿರ, ಅಜ್ಜಿಗೆ ೫ ಸಾವಿರ, ಅಂಕಲ್ ಅರ್ಜುನ್ ಸರ್ಜಾ ಅವರಿಗೆ ೫ ಸಾವಿರ ನೀಡಿದ್ರಂತೆ. ನಂತರ ಅರ್ಜುನ್ ಸರ್ಜಾ ಅವರು ಬಟ್ಟೆ ತಗೋ ಎಂದು ಹೇಳಿ ಕಳಿಸಿದ್ದರು ಎಂದು ಧ್ರುವ ಸರ್ಜಾ ಸಂದರ್ಶನವೊಂದರದಲ್ಲಿ ಹೇಳಿಕೊಂಡಿದ್ದಾರೆ.      

short by Pawan / more at Balkani News

Comments