Skip to main content


ಐಪಿಎಲ್‍ನಲ್ಲಿ ಕನ್ನಡಿಗರ ಕಲರವ

ಸ್ಥಳೀಯ , ದೇಶಿಯ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗಮನ ಸೆಳೆದಿರುವ ಕನ್ನಡದ ಕಲಿಗಳು ಐಪಿಎಲ್ 11ರಲ್ಲೂ ತಮ್ಮ ಅಮೋಘ ಪ್ರದರ್ಶನದಿಂದ ಆಯಾ ತಂಡಗಳ ಮುದ್ದಿನ ಕಣ್ಮಣಿಗಳಾಗಿದ್ದಾರೆ. ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರುತ್ತಿರುವ ಕನ್ನಡಿಗ ಆಟಗಾರರು ತಾವು ಪ್ರತಿನಿಧಿಸಿರುವ ತಂಡಗಳನ್ನು ಪ್ಲೇಆಫ್‍ಗೇರಿಸಲೇಬೇಕೆಂಬ ಛಲ ತೊಟ್ಟಿದ್ದರಿಂದಲೇ ಕೋಲ್ಕತ್ತಾ ನೈಟ್ ರೈಡರ್ಸ್ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ. ಬಲಿಷ್ಠ ಬ್ಯಾಟಿಂಗ್ ಅಸ್ತ್ರವೆಂದೇ ಬಿಂಬಿಸಿಕೊಂಡಿದ್ದ ಆರ್‍ಸಿಬಿ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಶ್ರೇಯಸ್ ಗೋಪಾಲ್ ಹಾಗೂ ಕೃಷ್ಣಪ್ಪ ಗೌತಮ್ ತಮ್ಮ ತಂಡವನ್ನು ಪ್ಲೇಆಫ್‍ಗೇರುವ ಕನಸನ್ನು ಜೀವಂತವಾಗಿರಿಸಿದ್ದಾರೆ. ಸಮರ್ಥ ಬೌಲಿಂಗ್ ಪಡೆಯನ್ನೇ ಹೊಂದಿರುವ ಸನ್‍ರೈಸರ್ಸ್ ವಿರುದ್ಧ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದಿಂದ ರಾಬಿನ್ ಉತ್ತಪ್ಪ ತಮ್ಮ ತಂಡಕ್ಕೆ ಆಸರೆಯಾಗಿ ಮಿಂಚಿದರೆ, ಎಸ್‍ಆರ್‍ಎಚ್‍ನ ಬ್ಯಾಟಿಂಗ್ ಬಲವನ್ನು ದಮನಗೊಳಿಸಿದ್ದು ಬೆಂಗಳೂರಿನವರೇ ಆದ ಪ್ರಸಿದ್ಧಕೃಷ್ಣ ಎನ್ನುವುದು ಇಲ್ಲಿ ಉಲ್ಲೇಖಾರ್ಹ.   

short by Pawan / more at Eesanje

Comments