Skip to main content


ಸಿರಾಜ್ ಮನೆಯಲ್ಲಿ ಬಿರಿಯಾನಿ ಪಾರ್ಟಿ ಮಾಡಿದ ಕೊಹ್ಲಿ ಟೀಂ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಲ್ಲ. ಆದ್ರೂ ತಂಡದ ಆತ್ಮವಿಶ್ವಾಸ ಕಡಿಮೆಯಾಗಿಲ್ಲ. ಮುಂದಿನ ಪಂದ್ಯಕ್ಕೆ ಟೀಂ ಸಿದ್ಧತೆ ನಡೆಸುತ್ತಿದೆ. ಸೋಮವಾರ ಬೆಂಗಳೂರು ತಂಡ ಹೈದ್ರಾಬಾದ್ ಜೊತೆ ಸೆಣೆಸಲಿದೆ. ಹೈದ್ರಾಬಾದ್ ಹೆಸರು ಹೇಳ್ತಿದ್ದಂತೆ ಬಿರಿಯಾನಿ ನೆನಪು ಮೊದಲು ಬರುತ್ತದೆ. ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಹೈದ್ರಾಬಾದ್ ಬಿರಿಯಾನಿ ರುಚಿ ಸವಿದಿದ್ದಾರೆ. ಪಂದ್ಯದ ಹಿನ್ನೆಲೆಯಲ್ಲಿ ಹೈದ್ರಾಬಾದ್ ತಲುಪಿರುವ ಕೊಹ್ಲಿ ಪಡೆ ಬಿರಿಯಾನಿ ಪಾರ್ಟಿ ಮಾಡಿದೆ. ಆಟಗಾರ ಮೊಹಮ್ಮದ್ ಸಿರಾಜ್ ಮನೆಯಲ್ಲಿ ಭರ್ಜರಿ ಊಟ ಮಾಡಿದ ಕೊಹ್ಲಿ ಹಾಗೂ ಕೆಲ ಆಟಗಾರರು ಬಿರಿಯಾನಿ ರುಚಿ ನೋಡಿದ್ದಾರೆ.ಕೊಹ್ಲಿ ಜೊತೆ ಪಾರ್ಥಿವ್ ಪಟೇಲ್, ಚಾಹಲ್ ಹಾಗೂ ಮನ್ದೀಪ್ ಸಿಂಗ್ ಇರುವ ಫೋಟೋ ವೈರಲ್ ಆಗಿದೆ. ಭಾನುವಾರ ಅಭ್ಯಾಸ ಮುಗಿಸಿ ಸಿರಾಜ್ ಮನೆಗೆ ಹೋದ ಆಟಗಾರರು ಭರ್ಜರಿ ಊಟ ಮಾಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ಸಿರಾಜ್ ಮನೆಯಲ್ಲಿ ಆಟಗಾರರು ತಂಗಿದ್ದರು. ನೆಲದ ಮೇಲೆ ಕುಳಿತು ಊಟ ಮಾಡಿದ ಆಟಗಾರರು ಮುಂಬೈ-ಕೊಲ್ಕತ್ತಾ ಪಂದ್ಯವನ್ನೂ ವೀಕ್ಷಿಸಿದ್ದಾರೆ.         

short by Prajwal / more at Kannadadunia

Comments