Skip to main content


ಸಿನಿಮಾಗೂ ಮುಂಚೆ ದರ್ಶನ್, ಯಶ್, ಗಣೇಶ್ ಅಭಿನಯಿಸಿದ್ದ ಧಾರಾವಾಹಿ..?

ಸದ್ಯ, ಸ್ಯಾಂಡಲ್ ವುಡ್ ಇಂಡಸ್ಟ್ರಿ ಅಂದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್, ಸುದೀಪ್, ಶಿವಣ್ಣ ಹೀಗೆ ಈ ನಟರು ಮೊದಲ ಸಾಲಿನಲ್ಲಿ ಬರ್ತಾರೆ. ವಿಶೇಷ ಅಂದ್ರೆ ದರ್ಶನ್, ಗಣೇಶ್, ಯಶ್ ಸೇರಿದಂತೆ ಮತ್ತೆ ಕೆಲವರು ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಕಾಣುವುದಕ್ಕೂ ಮುಂಚೆ ಕಿರುತೆರೆಯಲ್ಲಿ ಕೆಲಸ ಮಾಡಿದ್ದರು. ಪೋಷಕ ಪಾತ್ರಗಳಲ್ಲಿ ಬಣ್ಣಹಚ್ಚಿದ್ದರು.

ಎಲ್ಲರಿಗೂ ಗೊತ್ತಿದೆ ದರ್ಶನ್ ನಾಯಕನಾಗುವ ಮೊದಲು ಹಲವು ಚಿತ್ರಗಳಲ್ಲಿ ಪೋಷಕ ಕಲಾವಿದನಾಗಿ ನಟಿಸಿದ್ದರು. 'ಮೆಜೆಸ್ಟಿಕ್' ಚಿತ್ರಕ್ಕೂ ಮುಂಚೆ 'ದೇವರ ಮಗ', 'ಮಹಾಭಾರತ' ಅಂತ ಸಿನಿಮಾದಲ್ಲಿ ನಟಿಸಿದ್ದರು. ಆದ್ರೆ, ಅದಕ್ಕೂ ಮುಂಚೆ 'ಚಂದ್ರಿಕಾ' ಎಂಬ ಧಾರಾವಾಹಿಯಲ್ಲಿ ದರ್ಶನ್ ಬಣ್ಣ ಹಚ್ಚಿದ್ದರು.

ರಾಕಿಂಗ್ ಸ್ಟಾರ್ ಯಶ್ 'ಜಂಭದ ಹುಡುಗಿ', 'ಮೊಗ್ಗಿನ ಮನಸು' ಚಿತ್ರಗಳಲ್ಲಿ ಅಭಿನಯಿಸುವ ಮುಂಚೆ ಧಾರಾವಾಹಿಯಲ್ಲಿ ನಟಿಸಿದ್ದರು. ಅಶೋಕ್ ಕಶ್ಯಪ್ ನಿರ್ದೇಶನದ 'ನಂದ ಗೋಕುಲ' ಸೀರಿಯಲ್ ನಲ್ಲಿ ಮುಖ್ಯಪಾತ್ರವನ್ನ ನಿರ್ವಹಿಸುತ್ತಿದ್ದರು.

'ಕಾಮಿಡಿ ಟೈಂ' ಮೂಲಕ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಗಣೇಶ್ ನಂತರ ಇಂಡಸ್ಟ್ರಿಯಲ್ಲಿ ಗೋಲ್ಡನ್ ಸ್ಟಾರ್ ಆದರು. ಆದ್ರೆ, ಗಣೇಶ್ ಕೂಡ ಹಲವು ಸೀರಿಯಲ್ ನಲ್ಲಿ ನಟಿಸಿದ್ದರು. ಸಿಹಿ ಕಹಿ ಚಂದ್ರು ನಿರ್ದೇಶನದ 'ಪಾಪ ಪಾಂಡು', ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಯದ್ವ ತದ್ವಾ', 'ವಠಾರ' ಅಂತ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.    

short by Pawan / more at Filmibeat

Comments