Skip to main content


ಮೊಬೈಲ್‌ಗೆ ಆಧಾರ್‌ ಕಡ್ಡಾಯವಲ್ಲ

ಮೊಬೈಲ್‌ನ ಹೊಸ ಸಿಮ್‌ ಕಾರ್ಡ್‌ ಪಡೆಯಲು ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯ ಅಲ್ಲ. ಮತದಾರರ ಚೀಟಿ, ಚಾಲನಾ ಪರವಾನಗಿಯಂತಹ ಯಾವುದೇ ಮೌಲಿಕ ದಾಖಲೆಗಳನ್ನು ನೀಡಿ ಹೊಸ ಮೊಬೈಲ್‌ ಸಂಪರ್ಕ ಪಡೆಯಬಹುದು ಎಂದು ದೂರ ಸಂಪರ್ಕ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. 'ಆಧಾರ್‌ ಇಲ್ಲ ಎಂಬ ಕಾರಣಕ್ಕೆ ಮೊಬೈಲ್‌ ಸಿಮ್‌ ನಿರಾಕರಿಸುವಂತಿಲ್ಲ. ಯಾವುದೇ ಒಂದು ಅಧಿಕೃತ ಗುರುತು ಚೀಟಿ ಪಡೆದುಕೊಂಡು ಸಿಮ್‌ ನೀಡಬಹುದು. ಗುರುತಿನ ಮರು ದೃಢೀಕರಣಕ್ಕೆ ಆಧಾರ್‌ ಬಳಸುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತೀರ್ಪು ಬರುವವರೆಗೆ ಕಾಯಬೇಕಾಗಿದೆ' ಎಂದು ದೂರ ಸಂಪರ್ಕ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ತಿಳಿಸಿದ್ದಾರೆ. ಸಿಮ್‌ಗೆ ಆಧಾರ್‌ ಜೋಡಣೆ ನೀತಿ ಈಗಲೂ ಜಾರಿಯಲ್ಲಿದೆ. ಆಧಾರ್‌ ನೀಡದೆ ಸಿಮ್‌ ಪಡೆದುಕೊಂಡಿದ್ದರೆ ಮುಂದೊಂದು ದಿನ ಆಧಾರ್‌ ನೀಡಿ ಮರು ದೃಢೀಕರಣ ನಡೆಸಬೇಕಾಗುತ್ತದೆ. ಆದರೆ, ಸಿಮ್‌ ಪಡೆದುಕೊಳ್ಳುವಾಗಲೇ ಆಧಾರ್‌ ಸಂಖ್ಯೆ ನೀಡಿರುವ ಗ್ರಾಹಕರು ಮರು ದೃಢೀಕರಣ ಮಾಡುವ ಅಗತ್ಯ ಇಲ್ಲ ಎಂದು ದೂರಸಂಪರ್ಕ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.    

short by Prajwal / more at Prajavani

Comments