Skip to main content


ವಾಟ್ಸ್‌ಆಪ್‌ಗೆ ಶೀಘ್ರವೇ ಭಾರತೀಯ ಮುಖ್ಯಸ್ಥ..?

ಟೆಕ್ ಲೋಕದಲ್ಲಿ ಭಾರತೀಯರು ಮೇಲುಗೈ ಸಾಧಿಸುತ್ತಿದ್ದು, ಸರ್ಚ್ ಇಂಜಿನ್ ದೈತ್ಯ ಗೂಗಲ್ CEO ಹುದ್ದೆಯನ್ನು ಭಾರತೀಯ ಮೂಲದ ಸುಂದರ್ ಪಿಚ್ಚೈ ಅಲಂಕರಿಸಿರುವ ಮಾದರಿಯಲ್ಲಿಯೇ ಮತ್ತೊಂದು ದೈತ್ಯ ಟೆಕ್ ಕಂಪನಿಯ ಮುಖ್ಯಸ್ಥರಾಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ನೇಮಕವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಈ ಕುರಿತು ಮಾಹಿತಿಯೂ ದೊರೆತಿದೆ.

ಮೂಲಗಳ ಪ್ರಕಾರ ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್ ಒಡೆತನದ, ಜಾಗತಿಕವಾಗಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೇಸೆಂಜಿಗ್ ತಾಣ ವಾಟ್ಸ್‌ಆಪ್ ಕಾರ್ಯ ನಿರ್ವಹಣಾಧಿಕಾರಿ ಸ್ಥಾನಕ್ಕೆ ಜಾನ್​ ಕೋಮ್ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ, ಆ ಹುದ್ದೆಗೆ ಭಾರತೀಯರೊಬ್ಬರ ಆಯ್ಕೆ ಮಾಡಲು ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ.             

short by NP / more at Gizbot

Comments