Skip to main content


ಚಾಮುಂಡೇಶ್ವರಿ ಪ್ರಚಾರದ ಸಿಎಂ ಆಹ್ವಾನಕ್ಕೆ ಕಿಚ್ಚ ಪ್ರತಿಕ್ರಿಯೆ

ಸಿಎಂ ಪರ ಬದಾಮಿಗೆ ಪ್ರಚಾರಕ್ಕೆ ಹೋಗಲ್ಲ ಅಂತ ಹೇಳಿದ್ದ ನಟ ಕಿಚ್ಚ ಅವರನ್ನು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರಕ್ಕೂ ಕರೆದಿದ್ದಾರೆ ಅಂತ ಸುದೀಪ್ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜುಗೌಡ ಪರ ಪ್ರಚಾರಕ್ಕಾಗಿ ಸುರಪುರ ಹೆಲಿಪ್ಯಾಡಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಸಿಎಂ ಪ್ರಚಾರಕ್ಕೆ ಚಾಮುಂಡೇಶ್ವರಿಗೆ ಕರೆದಿದ್ದಾರೆ. ಆದ್ರೆ ಈ ಬಗ್ಗೆ ನಾನು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಕ್ಷೇತ್ರದ ನಾಲ್ಕು ಕಡೆ ಅಂದ್ರೆ ಸುರಪುರ, ಕಕ್ಕೇರಾ, ಹುಣಸಗಿ ಹಾಗೂ ಕೊಡೆಕಲ್ ದಲ್ಲಿ ಪ್ರಚಾರ ಮಾಡಲಿರುವ ಸುದೀಪ್ ಅವರು, ವೈಯಕ್ತಿಕವಾಗಿ ನಾನು ನನ್ನ ಸಹೋದರ ರಾಜುಗೌಡ ಪರ ಪ್ರಚಾರ ಮಾಡಲು ಬಂದಿದ್ದೆನೆ. ಈ ಚುನಾವಣೆಯಲ್ಲಿ ರಾಜುಗೌಡ ಗೆಲ್ಲುತ್ತಾರೆ. ಬಾದಾಮಿಯಲ್ಲಿ ಸಿಎಂ ಪರ ಪ್ರಚಾರಕ್ಕೆ ಹೋಗುವುದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.     

short by Pawan / more at Public Tv

Comments