Skip to main content


ಶಿವರಾಜ್‌‌‌ಕುಮಾರ್‌ ಅಭಿಮಾನಿಗಳಿಂದ ಹೊಸ ಸಿನಿಮಾ ನಿರ್ಮಾಣ

ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವನ್ನು ನಿರ್ಮಿಸುವುದು ಹೊಸ ವಿಷಯವೇನಲ್ಲ. ಈಗ ಬೆಳಗಾವಿಯ 'ಸಿಂಹದ ಮರಿ
ಡಾ. ಶಿವರಾಜ್‍ಕುಮಾರ್' ಅಭಿಮಾನಿಗಳ ಸಂಘದವರಾದ ಮಲ್ಲೇಶ ಪೂಜಾರಿ ಮತ್ತು ಶೇಖರ ಕಾಲೇರಿ ಕೂಡಾ ಒಂದು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ವಿಶೇಷವೆಂದರೆ, ನಿರ್ಮಾಪಕರು ಶಿವರಾಜಕುಮಾರ್ ಅವರ ಅಭಿಮಾನಿಗಳಾಗಿದ್ದರೂ, ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ನಟಿಸುತ್ತಿಲ್ಲ. ಬದಲಿಗೆ, ಹೊಸಬರ ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ಆ ಚಿತ್ರದ ಮೊದಲ ದೃಶ್ಯಕ್ಕೆ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರತಂಡದವರಿಗೆ ಹಾರೈಸಿದ್ದಾರೆ. ಇತ್ತೀಚೆಗೆ ರಾಚೇನಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಡಾ. ಶಿವರಾಜ್‍ಕುಮಾರ್ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.    

short by Pawan / more at Eenadu India

Comments