Skip to main content


ಅಪಮಾನ ಮೆಟ್ಟಿನಿಂತು ಚೆನ್ನೈ "ಕಿಂಗ್" ಆದ ಕೂಲ್ ಕ್ಯಾಪ್ಟನ್!

ಅಪಮಾನಗಳೇ ಗೆಲುವಿನ ಮೆಟ್ಟಿಲಾಗಬಲ್ಲವು ಎಂಬುದನ್ನು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಮತ್ತೆ ಸಾಬೀತು ಪಡಿಸಿದ್ದು, 2017ರಲ್ಲಿ ಆದ ಅವಮಾನವನ್ನು 2018ರಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಮೆಟ್ಟಿ ನಿಂತಿದ್ದಾರೆ.

ಹೌದು.. ಚೆನ್ನೈ ತಂಡ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ನಿಷೇಧಕ್ಕೆ ಒಳಗಾಗಿದ್ದಾಗ ಧೋನಿ ಪುಣೆ ತಂಡದ ಸಾರಥ್ಯವಹಿಸಿದ್ದರು. ಅವರ ಅದೃಷ್ಟ ಕೈಕೊಟ್ಟಿತ್ತೋ ಅಥವಾ ತಂಡದ ಪ್ರದರ್ಶನವೇ ಉತ್ತಮವಾಗಿರಲಿಲ್ಲವೋ ಗೊತ್ತಿಲ್ಲ. ಆದರೆ ಧೋನಿ ನೇತೃತ್ವದ ಪುಣೆ ತಂಡ ಮಾತ್ರ ನೀರಸ ಪ್ರದರ್ಶನ ತೋರಿ ಟೂರ್ನಿಯಿಂದ ಹೊರಬಿತ್ತು. ಆದರೆ 2018ರ ಐಪಿಎಲ್ ಟೂರ್ನಿ ಘೋಷಣೆಯಾಗಿದ್ದೇ ತಡ ಕ್ಯಾಪ್ಟನ್ ಕೂಲ್ ಫೀನಿಕ್ಸ್ ನಂತೆ ಎದ್ದು ಬಂದು ಮತ್ತೆ ತಮ್ಮದೇ ಫೇವರಿಟ್ ತಂಡ ಸಾರಥ್ಯ ವಹಿಸಿಕೊಂಡರು.

ಚೆನ್ನೈ ತಂಡದ ಪರ ಜಾಹಿರಾತುಗಳಲ್ಲೂ ಧೋನಿ ಅವರನ್ನು ಅಭಿಮಾನಿಗಳು ತಲೈವಾ, ತಲಾ ಎಂದೇ ಕರೆಯುತ್ತಿದ್ದರು. ಚಿತ್ರರಂಗದಲ್ಲಿ ರಜನಿ ಸೂಪರ್ ಸ್ಟಾರ್ ಆದರೆ ಕ್ರಿಕೆಟ್ ನಲ್ಲಿ ಧೋನಿ ಸೂಪರ್ ಸ್ಟಾರ್ ಎಂದು ಅಭಿಮಾನಿಗಳು ಬಿಂಬಿಸುತ್ತಿದ್ದರು. ಇದೀಗ ಅಭಿಮಾನಿಗಳ ಈ ನಿರೀಕ್ಷೆಯನ್ನು ಹುಸಿಗೊಳಿಸದ ಧೋನಿ ತಮ್ಮ ಚೆನ್ನೈ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದ್ದು, ಮೂರನೇ ಬಾರಿಗೆ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ.      

short by Pawan / more at Kannada Prabha

Comments