Skip to main content


ನವಾಜುದ್ದೀನ್ ಸಿದ್ದಿಖಿ ಚಿತ್ರದಲ್ಲಿ ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್

ಯೂ ಟರ್ನ್ ಬೆಡಗಿ ಎಂದೇ ಫೇಮಸ್ ಆದ ನಟಿ ಶ್ರದ್ದಾ ಶ್ರೀನಾಥ್ ಯೂಟರ್ನ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಿನಿಪ್ರಿಯರ ಗಮನ ಸೆಳೆದಿದ್ದರು. ಅಲ್ಲದೇ ಮಲಯಾಳಂ ನಲ್ಲೂ ಗುರುತಿಸಿಕೊಂಡಿದ್ದರು. ಈಗ ಈ ಚೆಲುವೆ ಬಾಲಿವುಡ್ ಗೆ ಹಾರಲಿದ್ದಾರೆ. ಯೆಸ್, ಬಾಲಿವುಡ್ ನ ನವಾಜುದ್ದೀನ್ ಸಿದ್ದಿಖಿ ಜೊತೆ ಶ್ರದ್ಧಾ ತೆರೆ ಹಂಚಿಕೊಳ್ಳಲಿದ್ದಾರೆ. ಇದೊಂದು ಕೌಟುಂಬಿಕ ಸಿನಿಮವಾಗಿದ್ದು, ಇನ್ನೂ ಕೂಡ ಟೈಟಲ್ ಫಿಕ್ಸ್ ಆಗಿಲ್ಲ. ಇನ್ನೇನು ಚಿತ್ರೀಕರಣ ಈ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗಲಿದೆ. ಇದರ ಜೊತೆಗೆ ಮಿಲನ್ ಟಾಕೀಸ್ ಎನ್ನುವ ಬಾಲಿವುಡ್ ಸಿನಿಮಾದಲ್ಲೂ ಶ್ರದ್ದಾ ಅಭಿನಯಿಸುತ್ತಿದ್ದಾರೆ.       

short by Prajwal / more at Kannadanewsnow

Comments