Skip to main content


ಯಂಗ್ ರೆಬೆಲ್ ಸ್ಟಾರ್ ಗೆ ಸ್ವಾಗತ ಕೋರಿದ ಸ್ಯಾಂಡಲ್ ವುಡ್

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಿನ್ನೆಯಷ್ಟೇ ಅಭಿಷೇಕ್ ಅಭಿನಯದ ಮೊದಲ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಅಭಿಷೇಕ್ ಅಭಿನಯದ 'ಅಮರ್' ಚಿತ್ರದ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ನೋಡಿದ ತಕ್ಷಣ ಅಭಿಮಾನಿಗಳ ಜೊತೆಗೆ ಕನ್ನಡ ಸಿನಿಮಾರಂಗದ ಕಲಾವಿದರು ಹಾಗೂ ತಂತ್ರಜ್ಞರು ಅಭಿಷೇಕ್ ಅವರಿಗೆ ಸ್ವಾಗತ ಕೋರಿದ್ದಾರೆ .ಕಿಚ್ಚ ಸುದೀಪ್ ಕೂಡ ಅಭಿಷೇಕ್ ಅವರಿಗೆ ವಿಶೇಷವಾಗಿ ಸ್ವಾಗತ ಕೋರಿದ್ದಾರೆ ನಿನ್ನದೆ ಸಾಮ್ರಾಜ್ಯ ಕಟ್ಟಿಕೊ.ಅಲ್ಲಿ ನೀನೆ ರಾಜನಾಗಿರು. ನಿನ್ನದೆ ಸ್ಟೈಲ್ ಕ್ರಿಯೆಟ್ ಮಾಡು , ಅಭಿನಂದನೆಗಳು ಎಂದಿದ್ದಾರೆ.   

short by Pawan / more at Filmibeat

Comments