Skip to main content


ವೈರಲ್ ಆಯ್ತು ಸಾಮಾನ್ಯರಂತೆ ಕುಳಿತು ಐಪಿಎಲ್ ಪಂದ್ಯ ವೀಕ್ಷಿಸಿದ ದ್ರಾವಿಡ್ ವಿಡಿಯೋ

ಭಾನುವಾರ ನಡೆದ ಆರ್‌ಸಿಬಿ-ಕೆಕೆಆರ್ ಪಂದ್ಯವನ್ನು ಭಾರತ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಸಾಮಾನ್ಯ ವ್ಯಕ್ತಿಯಂತೆ ಕುಳಿತು ವೀಕ್ಷಿಸಿದ್ದು ಈಗ ಆ ವಿಡಿಯೋ ವೈರಲ್ ಆಗಿದೆ.ರಾಹುಲ್ ದ್ರಾವಿಡ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ವಿಐಪಿ ಬಾಕ್ಸ್ ನಲ್ಲಿ ಕುಳಿತುಕೊಳ್ಳದೇ ಅಭಿಮಾನಿಗಳ ನಡುವೆ ಸಾಮಾನ್ಯ ಜನರಂತೆ ಕುಳಿತುಕೊಂಡು ಆರ್‌ಸಿಬಿಯನ್ನು ಬೆಂಬಲಿಸಿದ್ದಾರೆ. ಇದೇ ವೇಳೆ ದ್ರಾವಿಡ್ ಕುಳಿತುಕೊಂಡಿದ್ದ ವಿಡಿಯೋವನ್ನು ಐಪಿಎಲ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ. “ಆರ್‌ಸಿಬಿಯನ್ನು ಬೆಂಬಲಿಸಲು ಯಾರು ಬಂದಿದ್ದಾರೆ ನೋಡಿ. ದಿ-ವಾಲ್, ದಿ ಲೆಜೆಂಡ್, ರಾಹುಲ್ ದ್ರಾವಿಡ್” ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ. ವೈರಲ್ ಆಗಿರುವ ವಿಡಿಯೋವನ್ನು ನೋಡಿರುವ ರಾಹುಲ್ ದ್ರಾವಿಡ್ಅಭಿಮಾನಿಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಅವರನ್ನು ಆರ್‌ಸಿಬಿ ಕೋಚ್ ಮಾಡಿ ಎಂದು ಕೆಲವು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.             

Short by Prajwal / more at Newspoint

Comments