Skip to main content


ದರ್ಶನ್ ಬಗ್ಗೆ ನನಗೆ ಯಾವ ಬೇಸರವೂ ಇಲ್ಲ ಎಂದ ಕಿಚ್ಚ

ನನಗೆ ಯಾವ ಬೇಸರವೂ ಇಲ್ಲ. ಯಾರೋ ಅವನ ತಲೆಗೆ ಏನೋ ತುಂಬಿದ್ದಾರೆ. ಅದಕ್ಕೆ ಕೋಪ ಮಾಡ್ಕೊಂಡಿದ್ದಾರೆ. ನನಗೆ ಗೊತ್ತಿರೋ ಪ್ರಕಾರ ವನ್ ಸೈಡ್ ಆಫ್ ಹಿಮ್ ಈಸ್ ವೆರಿ ಸ್ವೀಟ್. ನಾನು ಅವನನ್ನು ಚಿಕ್ಕಂದಿನಿಂದಲೂ ನೋಡಿದ್ದೀನಿ. ನನ್ನ ಬಗ್ಗೆ ಅವನು ತುಂಬ ಪೊಸೆಸಿವ್ ಆಗಿದ್ದ. ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಅವನಿಗೆ ಬೇಸರ ಆಗಿರಬಹುದು. ಆದರೆ ಅವೆಲ್ಲ ತಮ್ಮ ಪಾಡಿಗೆ ನಡೆದ ಸಂಗತಿಗಳು. ಹಾಗೆ ನೋಡಿದರೆ, ಯಾರ ಮೇಲಾದರೂ ದ್ವೇಷ ಸಾಧಿಸೋದಾದರೂ ಯಾಕೆ? ಎಲ್ಲರೂ ಸಾಧಕರೆ. ಇವತ್ತು ಶಿವಣ್ಣ ನಾನು ಚೆನ್ನಾಗಿದ್ದೀವಿ ಅಂದರೆ ಅವರ ಮೇಲೆ ಮೊದಲಿಂದಲೂ ಪ್ರೀತಿ ಇತ್ತು. ಮಧ್ಯದಲ್ಲಿ ಹಾಳಾಗಿತ್ತು. ಅದೂ ಸತ್ಯವೇ. ಅದಕ್ಕೂ ಕಾರಣ ಇತ್ತು. ನಮ್ಮ ಕೈಗೇನಾದರೂ ನೋವಾಗಿದ್ರೆ ನಾವು ಕೈ ಕತ್ತರಿಸಿ ಎಸೀತೀವಾ, ಉಳಿಸಿಕೊಳ್ಳೋದಕ್ಕೆ ಪ್ರಯತ್ನ ಪಡೋದಿಲ್ವಾ? ಯಾಕೆಂದ್ರೆ ಅದು ನಮ್ಮ ದೇಹದ ಭಾಗ ಅಲ್ವಾ? ನಾವು ಫ್ರೆಂಡ್ಸ್ ಅಲ್ಲ ಅವನು ಟ್ವೀಟ್ ಮಾಡಿರೋದು ಆ ಕ್ಷಣದ ಸಿಟ್ಟು ಮಾತ್ರ. ಅದರಿಂದ ಅವನು ಕೆಟ್ಟವನಾಗೋಲ್ಲ. ಅವನು ಚೆನ್ನಾಗಿದ್ದಾನೆ. ಒಳ್ಳೇ ವ್ಯಕ್ತಿ. ಫ್ರೆಂಡ್ ಆಗಿರೋದಕ್ಕೆ ದಿನವೂ ಭೇಟಿ ಆಗಲೇಬೇಕು ಅಂತೇನಿಲ್ಲ. ಗೆಳೆಯನಿಗೆ ಒಳ್ಳೇದಾಗ್ಲಿ ಅನ್ನೋ ಹಾರೈಕೆ ಮನದಲ್ಲಿದ್ದರೆ ಸಾಕಲ್ವಾ. ಅದು ಯಾವತ್ತೂ ಇರುತ್ತೆ.

short by Prajwal / more at Suvarna News


Comments