Skip to main content


ಧ್ರುವ ಸರ್ಜಾ ನಟನೆಯ ಪೊಗರು ಚಿತ್ರಕ್ಕೆ ಜಗಪತಿ ಬಾಬು ವಿಲ್ಲನ್!

ದಕ್ಷಿಣ ಭಾರತ ಸಿನಿಮಾ ರಂಗದ ಬಹು ಬೇಡಿಕೆಯ ವಿಲ್ಲನ್ ಜಗಪತಿ ಬಾಬು ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಶಶಾಂಕ್ ನಿರ್ದೇಶನದ ಬಚ್ಚನ್ ಹಾಗೂ ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಸಿನಿಮಾ ನಂತರ ನಂದ ಕಿಶೋರ್ ನಿರ್ದೇಶಸಿ ಧ್ರುವ ಸರ್ಜಾ ನಟಿಸಿರುವ ಪೊಗರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜಗಪತಿ ಬಾಬು ವಿಲ್ಲನ್ ಆಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ. ಮೇ 21 ರಿಂದ ಶೂಟಿಂಗ್ ಗೆ ದಿನಾಂಕ ನಿಗದಿ ಪಡಿಸಲಾಗಿತ್ತು ಆದರೆ ತಮ್ಮ ಫಿಟ್ ನೆಸ್ ಗಾಗಿ ವರ್ಕೌಟ್ ಮಾಡಲು ಮತ್ತಷ್ಟು ಸಮಯಾವಕಾಶ ಕೋರಿದ್ದರು ಹೀಗಾಗಿ ಜೂನ್ 15 ರಿಂದ ಪೊಗರು ಶೂಟಿಂಗ್ ಆರಂಭವಾಗಲಿದೆ.    

short by Pawan / more at Kannada Prabha


Comments