Skip to main content


ಚುನಾವಣಾ ಪ್ರಚಾರಕ್ಕೆ ಹೋದಾಗ ಜಯಲಕ್ಷ್ಮೀಗೆ ಪೋಲಿ ಹುಡುಗರ ಕಾಟ!

ಪ್ರಚಾರಕ್ಕೆ ಹೋದಾಗ ಕಾರಿನಿಂದ ಇಳಿದು ಕೈ ಕೈಕಟ್ಟಿಕೊಂಡು ನನ್ನ ನೋಡುವುದು, ಹಿಂಬಾಲಿಸಿಕೊಂಡು ಬರುತ್ತಾರೆ. ಅಲ್ಲದೇ ಹಿಂದೆ ಬಿದ್ದು ಚೇಡಿಸುತ್ತಾರೆ ಎಂದು ಜಯಲಕ್ಷ್ಮೀ ಆಗ್ನೇಯ ವಿಭಾಗ ಡಿಸಿಪಿ ಬೋರಲಿಂಗಯ್ಯ ಅವರಿಗೆ ದೂರು ನೀಡಿದ್ದಾರೆ. ನಾನು ಈ ಬಾರಿ ಬಿಟಿಎಂ ಲೇಔಟ್ ನಲ್ಲಿ ಎಂಇಪಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೀನಿ. ನಾನು ಇಲ್ಲಿ ಪ್ರಚಾರಕ್ಕೆ ಬಂದ ದಿನದಿಂದ ಬೈಕಿನಲ್ಲಿ ಹಾಗೂ ಕಾರಿನಲ್ಲಿ ಒಂದೊಂದು ಗುಂಪು ಹಿಂಬಾಲಿಸಿ ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.       

short by Pawan / more at Kannada News Now


Comments