Skip to main content


ಚಾಮುಂಡೇಶ್ವರಿಯಲ್ಲಿ ಸಿಎಂ ಪರ ದರ್ಶನ್ ಪ್ರಚಾರ: ನಟನ ವಿರುದ್ಧ ಪ್ರತಿಭಟನೆ

ಚಾಮುಂಡೇಶ್ವರಿ ಕ್ಷೇತ್ರ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರತೊಡಗಿದ್ದು ತಾರಾ ಪ್ರಚಾರಕರು ಒಬ್ಬರಾದಂತೆ ಒಬ್ಬರು ಬಂದು ಸಿಎಂ ಪರ ಪ್ರಚಾರ ನಡೆಸುತ್ತಿದ್ದಾರೆ. ಶನಿವಾರ ನಟ ದರ್ಶನ್‌ ಅವರು ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಆಗಮಿಸಿದ್ದು, ನಾಗನಹಳ್ಳಿಯಲ್ಲಿ  ಜೆಡಿಎಸ್‌ ಕಾಯಕರ್ತರು ಪ್ರತಿಭಟನೆ ನಡೆಸಿ ವಿರೋಧ ತೋರಿದ್ದಾರೆ. ಅಂಬರೀಷ್‌ ಅವರ ಸಚಿವ ಸ್ಥಾನ ಕಿತ್ತುಕೊಂಡಾಗ ಯಾಕೆ ಮಾತನಾಡಲಿಲ್ಲ, ಕಾವೇರಿ ಪರ ಹೋರಾಟ ಯಾಕೆ ಮಾಡಲಿಲ್ಲ ಎಂದು ಪ್ರತಿಭಟನಾ ನಿರತರು ದರ್ಶನ್‌ ಅವರನ್ನು ಪ್ರಶ್ನಿಸಿದ್ದಾರೆ. ನಾಗನಹಳ್ಳಿಯಲ್ಲಿ ಸಿಎಂ ಪರ ನಟ ದರ್ಶನ್ ಮತಯಾಚಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರು ಧರಣಿ ಕುಳಿತು ದರ್ಶನ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.   

short by Pawan / more at Kannada Prabha


Comments