Skip to main content


ಚುನಾವಣೆ ಪ್ರಚಾರದ ವೇಳೆ ಇಂತಹ ಹೇಳಿಕೆ ನೀಡಿದ್ರು ಯಶ್

ನಟ ರಾಕಿಂಗ್ ಸ್ಟಾರ್ ಯಶ್ ಅವರು ರಾಜಕೀಯದಿಂದ ದೂರವಿದ್ದರೂ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷಭೇದವಿಲ್ಲದೇ, ತಮ್ಮ ಸ್ನೇಹಿತರ ಪರವಾಗಿ ಪ್ರಚಾರ ನಡೆಸಿದ್ದಾರೆ. ಭಾನುವಾರ ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ತಿಕೋಟಾದಲ್ಲಿ ಸಚಿವ ಎಂ.ಬಿ. ಪಾಟೀಲ್ ಪರವಾಗಿ ಪ್ರಚಾರ ನಡೆಸಿದ ಯಶ್, ಸಿ.ಎಂ. ಅಥವಾ ಶ್ರೀರಾಮುಲು ಅವರ ಪರವಾಗಿ ಮತಯಾಚಿಸಲು ಬಾದಾಮಿ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಬಾದಾಮಿ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದು, ಅಲ್ಲಿ ಹೋಗಿ ನಾವು ಏನು ಮಾಡುವಂತಿಲ್ಲ. ರಾಜಕೀಯ ರಾಜಕೀಯವಾಗಿ ನಡೆಯಬೇಕು ಎಂದು ಹೇಳಿದ್ದಾರೆ. ನನ್ನ ಪ್ರಚಾರದಿಂದ ದೊಡ್ಡ ಪರಿಣಾಮ ಬೀರುತ್ತದೆ ಎಂದು ಪ್ರಚಾರ ನಡೆಸುತ್ತಿಲ್ಲ. ಸ್ನೇಹಿತರ ಮಾತಿಗೆ ಬೆಲೆಕೊಟ್ಟು ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.    

short by Pawan / more at Kannadadunia

Comments