Skip to main content


ವಾಟಾಳ್ ಪ್ರಣಾಳಿಕೆಯಲ್ಲಿ ಏನುಂಟು ಏನಿಲ್ಲ! ಹೈಲೈಟ್ಸ್ ಹೀಗಿದೆ ನೋಡಿ

ವಾಟಾಳ್ ನಾಗರಾಜ್, ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಪ್ರಣಾಳಿಕೆಯನ್ನು ನಗರದ ಖಾಸಗಿ ಹೋಟೆಲ್‌ನಲ್ಲಿ ಪುತ್ರಿ ಅನುಪಮಾ ಜೊತೆ  ಬಿಡುಗಡ ಮಾಡಿದರು. ಇದೇ ವೇಳೆ ಅವರು ಮಾತನಾಡಿ  ಇದುವರೆಗೂ 5 ಬಾರಿ ಗೆಲುವನ್ನ ಪಡೆದಿದ್ದೇನೆ. ಈ ಬಾರಿಯೂ ಚಾಮರಾಜನಗರದಿಂದ ಸ್ಪರ್ಧಿಸುತ್ತಿದ್ದು, ಜಯ ಸಾಧಿಸುವ ವಿಶ್ವಾಸವಿದೆ ಎಂದರು.

ವಾಟಾಳ್ ಪಕ್ಷದ ಪ್ರಣಾಳಿಕೆ ಹೈಲೈಟ್ಸ್:
– ಬಡ ಮತ್ತು ಮಧ್ಯಮ ವರ್ಗದವರಿಗೆ ಉಚಿತ ಹೇರ್ ಕಟಿಂಗ್, ಶೇವಿಂಗ್ ವ್ಯವಸ್ಥೆ
– ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಒತ್ತು
– ಕತ್ತೆಯನ್ನ ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡುವುದು
– ಪ್ರೇಮಿಗಳ ದಿನಾಚರಣೆಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕು
– ಕತ್ತೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಅಭಿವೃದ್ಧಿ ಮಂಡಳಿ‌ ಸ್ಥಾಪನೆ
– ಕತ್ತೆ ಧರ್ಮದೇವತೆ, ಆದ್ದರಿಂದ ಕತ್ತೆಗೆ ಗೌರವ ನೀಡಬೇಕು
– ಪ್ರೇಮ ವಿವಾಹಕ್ಕೆ 50 ಸಾವಿರ ರೂ. ಗೌರವ ಧನಸಹಾಯ ನೀಡಬೇಕು
– ಆಟೋ ರಿಕ್ಷಾದವರಿಗೆ ರೈನ್‌ ಕೋಟ್ ನೀಡಬೇಕು
– ನಗರದಲ್ಲಿ ಕನಿಷ್ಠ 20 ಸಾವಿರ ಶೌಚಾಲಯ
– ರಾಜಕುಮಾರ್, ಬೇಂದ್ರೆ, ಮಾಸ್ತಿ, ಗುಬ್ಬಿವೀರಣ್ಣ ಮುಂತಾದವರ ಪ್ರತಿಮೆ ಅನಾವರಣ
– ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ
-ಕರ್ನಾಟಕದಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ
-ಉಚಿತ ಔಷಧ ವ್ಯವಸ್ಥೆ ಮತ್ತು ಕಲ್ಯಾಣ ಮಂಟಪ ನಿರ್ಮಾಣ
-ಬಡ ಹೆಣ್ಣುಮಕ್ಕಳ ಮದುವೆಗೆ 1 ಲಕ್ಷ ಹಣ ನೀಡುವುದು.            

short by Pawan / more at Kannada News Now

Comments