Skip to main content


ಸ್ಟಾರ್ ಆಂಕರ್ ಚಂದನ್ ನಿಧನ : ಅಣ್ಣಾವ್ರ ಅಭಿಮಾನಿಯ ಕಥೆ-ವ್ಯಥೆ

ಸುಮಾರು ಹತ್ತು ವರ್ಷದ ಹಿಂದೆ ಬೆಳಗ್ಗೆ ಹನ್ನೊಂದು ಗಂಟೆ ಯಾವಾಗ ಆಗುತ್ತೆ ಅಂತ ಅದೆಷ್ಟೋ ಅಭಿಮಾನಿಗಳು ಟಿವಿ ಮುಂದೆ ಕಾಯುತ್ತಿದ್ದರು. ಕಾರಣ U2 ಚಾನೆಲ್ ನಲ್ಲಿ ನಿರೂಪಕ ಚಂದನ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಹಾಗೂ ಆ ನಿರೂಪಕನ ಮೇಲೆ ಕನ್ನಡಿಗರಿಗಿದ್ದ ಪ್ರೀತಿ. ಈಗ ಸಾಕಷ್ಟು ಚಾನೆಲ್ ಗಳಿವೆ, ಹಲವಾರು ನಿರೂಪಕರಿದ್ದಾರೆ. ಆದರೆ ಅವರು ಯಾರು ಕೂಡ ನೆನಪಿನಲ್ಲಿ ಉಳಿದುಕೊಳ್ಳುವುದೇ ಇಲ್ಲ. ಆದರೆ ಚಂದನ್ ಮಾತ್ರ ಇವತ್ತಿಗೂ ಇವರೆಲ್ಲರ ಮಧ್ಯೆ ವಿಶಿಷ್ಟವಾಗಿ ನಿಲ್ಲುತ್ತಾರೆ. ನೂರಾರು ಆಂಕರ್ ಗಳ ಮಧ್ಯೆ ವಿಭಿನ್ನ ಎನ್ನಿಸಿಕೊಳ್ಳುತ್ತಿದ್ದರು.

ಸಾವಿರಾರು ಅಭಿಮಾನಿಗಳನ್ನು ಅವರ ಮಾತಿನಿಂದಲೇ ಪಡೆದುಕೊಂಡಿದ್ದರು. ಚಂದನ್ ಈಗ ನಮ್ಮ ಮಧ್ಯೆ ಇಲ್ಲವಾದರೂ, ಆತ ನಡೆಸಿಕೊಟ್ಟ ಕಾರ್ಯಕ್ರಮಗಳು, ಅವರ ಮಾತು, ಗಳಿಸಿದ್ದ ಹೆಸರು ಇಂದಿಗೂ ಎಲ್ಲರ ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. ಚಂದನ್ ಎಂದರೆ ಕನ್ನಡ ಎನ್ನುವಷ್ಟರ ಮಟ್ಟಿಗೆ ಸ್ನೇಹಿತರ ವಲಯದಲ್ಲಿ ಹಾಗೂ ಮಾಧ್ಯಮ ಲೋಕದಲ್ಲಿ ಗುರುತಿಸಿಕೊಂಡವರು. ಸಂಪೂರ್ಣವಾಗಿ ಕನ್ನಡದಲ್ಲಿಯೇ ಕಾರ್ಯಕ್ರಮ ನಡೆಸಿಕೊಡುವುದೇ ಅವರ ಸ್ಪೆಷಾಲಿಟಿ ಆಗಿತ್ತು. ಉದಯ ವಾಹಿನಿಯಲ್ಲಿ ಚಂದನ್ ಸಾಕಷ್ಟು ವರ್ಷಗಳು ನಿರೂಪಕರಾಗಿ ಕೆಲಸ ಮಾಡಿದ್ದರು. ಕನ್ನಡದ ಬಹುತೇಕ ಎಲ್ಲಾ ಕಲಾವಿದರ ಸಂದರ್ಶನ ಮಾಡುವ ಮೂಲಕ ಎಲ್ಲರನ್ನೂ ಭೇಟಿ ಮಾಡಿದ್ದರು. ಸ್ಟಾರ್ ಕಲಾವಿದರಿಗೆ ನೆಚ್ಚಿನ ಆಂಕರ್ ಆಗಿದ್ದರು.    

short by Pawan / more at Filmibeat

Comments