Skip to main content


ಪ್ರಧಾನಿ ಸೋಲುವ ಮುನ್ಸೂಚನೆ ಸಿಕ್ಕಿದೆ - ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ

ಆರ್ ಆರ್‌ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶವೇ ಪ್ರಧಾನಿ ಪರಜಯದ ಕೈಗನ್ನಡಿ ಎಂದು ಹೇಳಿದರು. ಆರ್‌ ಆರ್‌ ನಗರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ದೇಶದ ಅನೇಕ ಭಾಗಗಳಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಮೋದಿ ವಿರೋಧಿ ಅಲೆ ಕಾಣುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರ ಗೆಲುವು ನಿರೀಕ್ಷಿತ. ವಿಧಾನಸಭೆಗೆ ನಿಗದಿಪಡಿಸಿದ್ದ ಚುನಾವಣಾ ದಿನಾಂಕದಂದು ಆರ್‌ಆರ್‌ ನಗರದಲ್ಲೂ ಚುನಾವಣೆ ನಡೆದಿದ್ದರೆ, ಇದೇ ಫಲಿತಾಂಶವೇ ಬರುತ್ತಿತ್ತು ಎಂದರು.    

short by Pawan/ more at Daijiworld

Comments