Skip to main content


ರಣಬೀರ್ ಅನ್‌ಲೈಕ್ ಮಾಡಲಾರೆ: ಮನದ ಮಾತು ಬಿಚ್ಚಿಟ್ಟ ಅಲಿಯಾ ಭಟ್

ರಣಬೀರ್ ಕಪೂರ್ ಅಂಡ್ ಆಲಿಯಾ ಭಟ್ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎನ್ನುವುದು ಹಳೆಯ ಸಮಾಚಾರ. ಈಗ ರಣಬೀರ್ ಆಲಿಯಾ ಈ ಜೋಡಿಯ ನಡುವಲ್ಲೂ ಅಂತಹ ಒಂದು ಸ್ವಾರಸ್ಯ ಬಹಿರಂಗವಾಗಿದೆ. ಅಷ್ಟಕ್ಕೂ ಅದೆಲ್ಲವನ್ನೂ ಹೊರ ಹಾಕಿರುವುದು ಸ್ವತಃ ಆಲಿಯಾ ಭಟ್ಟೇ. ರಣಬೀರ್‌ಗೆ 08 ಅಂಕಿಯನ್ನು ಕಂಡರೆ ಇಷ್ಟ. ಅದು ನನಗೆ ಗೊತ್ತಾಯಿತು. ಗೊತ್ತಾದದ್ದೇ ತಡ ನನ್ನ ಈಮೇಲ್ ಐಡಿಯಲ್ಲಿ 08 ಸೇರಿಸಿಕೊಂಡೆ. ಒಮ್ಮೆ ರಣಬೀರ್ ಯಾಕೆ ಈ ಸಂಖ್ಯೆಯನ್ನು ಸೇರಿಸಿಕೊಂಡಿದ್ದೀಯಾ ಎಂದು ಕೇಳಿದರು. ನನಗೆ ಇಷ್ಟ ಎಂದೆ. ಆಗ ಅವರ ಮುಖದಲ್ಲಿ ತುಂಟ ನಗೆಯೊಂದು ಮೂಡಿದ್ದು ನನಗೆ ಇನ್ನೂ ನೆನಪಿದೆ. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಸಾಮ್ಯತೆಗಳು ನಮ್ಮ ನಡುವೆ ಇವೆ. ಮುಂದೆ ಹೇಗೋ ಏನೋ ನನಗೆ ಗೊತ್ತಿಲ್ಲ. ಆದರೆ ಈಗ ಮಾತ್ರ ನಾನು ರಣಬೀರ್‌ನನ್ನು ತುಂಬಾ ಲೈಕ್ ಮಾಡುತ್ತೇನೆ. ಅವನನ್ನು ಅನ್‌ಲೈಕ್ ಮಾಡಲು ನನ್ನ ಬಳಿ ಯಾವುದೇ ಕಾರಣಗಳಿಲ್ಲ' ಎಂದು ಹೇಳಿಕೊಂಡಿರುವುದು ಲವ್ ಪಕ್ಕಾ ಆಗಿದ್ಯಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಏನಾದರೂ ಆಗಲಿ ಸದ್ಯಕ್ಕೆ ಆಲಿಯಾ ಮನಸ್ಸಲ್ಲಿ ರಣಬೀರ್ ಗಟ್ಟಿ ಸ್ಥಾನವನ್ನು ಗಿಟ್ಟಿಸುವಲ್ಲಿ ಯಶ ಕಂಡಿದ್ದಾರೆ ಎನ್ನುವುದು ಮತ್ತೊಮ್ಮೆ ಸಾಬೀತಾದಂತಾಗಿದೆ.    

short by Pawan / more at Suvarna News

Comments