Skip to main content


ಪ್ರಿಯಾಂಕಾ ಬಟ್ಟೆಯಲ್ಲಿ ಎರಡು 'ತೂತು': ಟ್ವಿಟ್ಟರ್ ನಲ್ಲಿ ಜೋರಾಯ್ತು ಮಾತು

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಟ್ಟೆಯ ವಿಚಾರದಲ್ಲಿ ಪದೇ ಪದೇ ಸುದ್ದಿಯಾಗ್ತಿದ್ದಾರೆ. ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ವೇಳೆ ಪ್ರಿಯಾಂಕ ಧರಿಸಿದ್ದ ಬಟ್ಟೆ ಕೂಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ, ಪಿಗ್ಗಿ ತೊಟ್ಟಿದ್ದ ಸ್ಟೈಲಿಶ್ ಬಟ್ಟೆಯೊಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಪ್ರಿಯಾಂಕ ಚೋಪ್ರಾ ವಿನ್ಯಾಸಕ ಮಿಮಿ ಕಟ್ರೆಲ್ ವಿನ್ಯಾಸಗೊಳಿಸಿರುವ ನೀಲಿ ಬಣ್ಣದ ಸೂಟ್ ಡ್ರೆಸ್ ಧರಿಸಿ, ಕೈಯಲ್ಲಿ ಮಿನಿ ಪರ್ಸ್ ಇಟ್ಕೊಂಡು ಎಂಟ್ರಿ ಕೊಡ್ತಿರೋ ಫೋಟೋ ಎಲ್ಲ ಗಮನ ಸೆಳೆಯುತ್ತಿದೆ. ಪಿಗ್ಗಿಯ ಈ ಸ್ಟೈಲ್ ಗೆ ಫಿದಾ ಆಗಿರುವ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ, ಮತ್ತೆ ಕೆಲವರು ಕಾಲೆಳೆಯುತ್ತಿದ್ದಾರೆ. ಹೌದು, ಪ್ರಿಯಾಂಕಾ ಧರಿಸಿರುವ ಈ ಸೂಟ್ ನಲ್ಲಿ ಎರಡು ರಂಧ್ರವಾಗಿದೆ. ಪ್ರಿಯಾಂಕಾ ಎದೆ ಭಾಗದ ಎರಡು ಕಡೆ ಡ್ರೆಸ್ ಕತ್ತರಿಸಲಾಗಿದೆ. ಇದು ಸ್ಟೈಲಿಶ್ ಆಗಿದ್ದರೂ, ಇದನ್ನು ನೋಡಿದ ಅಭಿಮಾನಿಗಳು ಟ್ರೋಲ್ ಮಾಡ್ತಿದ್ದಾರೆ.          

short by Pawan / more at Oneindia


Comments