Skip to main content


ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಲು ಹೆದರಿದ್ದ ಆ ಮೂರು ಚಿತ್ರಗಳು ಯಾವುವು ಗೊತ್ತಾ??

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ವುಡ್ನ ಟಾಪ್ ನಟರಲ್ಲಿ ಒಬ್ಬರು. ಲೈಟ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ ದರ್ಶನ್ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಇಂಡಸ್ಟ್ರಿಗೆ ಕಾಲಿಟ್ಟರು ತದನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ, ತಮ್ಮ ಉತ್ತಮ ಅಭಿನಯದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿ ಚಾಲೆಂಜಿಂಗ್ ಸ್ಟಾರ್ ಆದರು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಈ ಮೂರು ಚಿತ್ರಗಳಲ್ಲಿ ನಟಿಸಲು ಬಹಳ ಭಯವಿತ್ತಂತೆ. ಆ ಮೂರು ಚಿತ್ರಗಳು ಯಾವುವೆಂದರೆ, ನಮ್ಮ ಪ್ರೀತಿಯ ರಾಮು ಈ ಚಿತ್ರದಲ್ಲಿ ದರ್ಶನ್ ಅವರು ಚಿತ್ರಪೂರ್ತಿ ಕುರುಡನ ಪಾತ್ರದಲ್ಲಿ ಅಭಿನಯಿಸಿದ್ದರು. ಕುರುಡನ ಪಾತ್ರದಲ್ಲಿ ಅಭಿನಯಿಸಲು ದರ್ಶನ್ ಅವರಿಗೆ ಅದು ದೊಡ್ಡ ಚಾಲೆಂಜ್ ಆಗಿತ್ತು. ದರ್ಶನ್ ಆ ಪಾತ್ರವನ್ನು ಪರ್ಫೆಕ್ಟ್ ಆಗಿ ಮಾಡಿ ಮುಗಿಸಿಬಿಟ್ಟರು. ಇನ್ನು ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಅವರು ನಿರ್ದೇಶಿಸಿದ್ದ ನವಗ್ರಹ ಚಿತ್ರ ಕೂಡ ದರ್ಶನ್ ಅವರಲ್ಲಿ ಭಯವನ್ನು ಸೃಷ್ಟಿಸಿತ್ತು. ಒಬ್ಬ ನಟ ಈ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದು ನಿಜಕ್ಕೂ ಚಾಲೆಂಜಿಂಗ್. ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಕೂಡ ದರ್ಶನ್ ಅವರಲ್ಲಿ ಈ ಭಯವನ್ನು ಉಂಟು ಮಾಡಿತ್ತಂತೆ. ಅದುವರೆಗೂ ಯಾವುದೇ ಪೌರಾಣಿಕ ಚಿತ್ರಗಳಲ್ಲಿ ಅಭಿನಯಿಸಿದ ದರ್ಶನ್ ಅವರಿಗೆ ಸಂಗೊಳ್ಳಿ ರಾಯಣ್ಣ ಚಿತ್ರ ಹೊಸತು.        

short by Pawan / more at Troll Haida

Comments