Skip to main content


ಸೋನಂ ವರ್ತನೆಯಿಂದ ಬೇಸರಗೊಂಡ ವಿರುಷ್ಕಾ ಸೇಡು ತೀರಿಸಿಕೊಳ್ತಾರಾ?

ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಮದುವೆ ವಿಚಾರ ಬಿಸಿಬಿಸಿ ಚರ್ಚೆಯಲ್ಲಿದೆ. ಸೋನಂ ಮದುವೆಗೆ ಅದ್ಧೂರಿ ತಯಾರಿ ನಡೆಯುತ್ತಿದೆ. ಬಾಲಿವುಡ್ ನ ದಿಗ್ಗಜರ ದಂಡೇ ಮದುವೆಗೆ ಬರ್ತಿದೆ. ಆದ್ರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸೋನಂ ವರ್ತನೆಗೆ ಕೋಪಗೊಂಡಂತಿದೆ. ಸೋನಂ ನೀಡಿದ ಉತ್ತರಕ್ಕೆ ವಿರುಷ್ಕಾ ಪ್ರತ್ಯುತ್ತರ ನೀಡಲು ಮುಂದಾಗಿದ್ದಾರೆ. ವಾಸ್ತವವಾಗಿ ವಿರುಷ್ಕಾ ಮದುವೆ ಪಾರ್ಟಿಗೆ ಸೋನಂ ಬಂದಿರಲಿಲ್ಲ. ವಿದೇಶದಲ್ಲಿ ಸೋನಂ ಶೂಟಿಂಗ್ ನಲ್ಲಿ ಬ್ಯುಸಿಯಿದ್ದ ಕಾರಣ ಮದುವೆ ಪಾರ್ಟಿಗೆ ಬಂದಿರಲಿಲ್ಲ. ಈಗ ಸೋನಂ ಮದುವೆ ಪಾರ್ಟಿಗೂ ವಿರುಷ್ಕಾ ಗೈರಾಗಲಿದ್ದಾರೆ. ಅನುಷ್ಕಾ ಶರ್ಮಾ 'ಝೀರೋ' ಚಿತ್ರದ ಶೂಟಿಂಗ್ ಗಾಗಿ ಅಮೆರಿಕಾಕ್ಕೆ ಹೋಗಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಬ್ಯುಸಿ. ಮೇ 7 ರಂದು ಕೊಹ್ಲಿ ತಂಡ ಹೈದ್ರಾಬಾದ್ ತಂಡವನ್ನು ಎದುರಿಸಲಿದೆ. ಹಾಗಾಗಿ ಕೊಹ್ಲಿ ಕೂಡ ಮದುವೆ, ಪಾರ್ಟಿಗೆ ಬರ್ತಿಲ್ಲ. ಇದು ಸೇಡಾ ಎಂದು ಕೆಲವರು ಪ್ರಶ್ನೆ ಮಾಡಿದ್ರೆ ಮತ್ತೆ ಕೆಲವರು ಕೆಲಸದ ಒತ್ತಡ ಸ್ವಾಮಿ ಎನ್ನುತ್ತಿದ್ದಾರೆ.               

short by Prajwal / more at Kannadadunia

Comments