Skip to main content


ನಟಸಾರ್ವಭೌಮ ಸೆಟ್ ನಿಂದ ಬಂದ ಸಖತ್ ಅಪ್ ಡೇಟ್ ಇದು..!!

ಮೊನ್ನೆ ಮೊನ್ನೆಯಷ್ಟೇ ಹಿರಿಯ ನಟಿ ಪಂಚಭಾಷಾ ತಾರೆಯಾದಂತಹ ಬಿ.ಸರೋಜದೇವಿ ಅವರು ನಟಸಾರ್ವಭೌಮ ಸೆಟ್ ನಲ್ಲಿ ಕಾಣಿಸಿಕೊಂಡಿದ್ರು.. ಅಪ್ಪು ಸಣ್ಣವರಿದ್ದಾಗ ಯಾರಿವನು ಸಿನಿಮಾದಲ್ಲಿ ಈ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ರು.. ಇದಾದ ಬಳಿಕ ಮತ್ತೊಮ್ಮೆ ಈ ಜೋಡಿಯನ್ನ ನೋಡಲು ಸಾಧ್ಯವೆ ಆಗಲಿಲ್ಲ.. ಹೀಗಾಗೆ ಈ ಜೋಡಿಯನ್ನ 34 ವರ್ಷಗಳ ನಂತರ ನೋಡುವ ಭಾಗ್ಯ ಅಭಿಮಾನಿಗಳಿಗೆ ಒದಗಿ ಬರ್ತಿರೋದು ಇದೆ ಸಿನಿಮಾದ ಮೂಲಕ. ಸಿನಿಮಾದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರು ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಹೀಗಾಗೆ ಇದೇ ಸಂದರ್ಭದಲ್ಲಿ ಸರೋಜ ದೇವಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಸಿಕ್ಕಿರುತ್ತದೆ. ಈ ಸಂದರ್ಭದಲ್ಲಿ ಅಪ್ಪು ಸರೋಜದೇವಿ ಅವರನ್ನ ಸಂದರ್ಶನ ಮಾಡಲು ಬರುತ್ತಾರೆ.. ಇದರ ಚಿತ್ರೀಕರಣ ನಡೆಯುತ್ತಿದ್ದು ಚಿತ್ರತಂಡ ಈ ಭಾಗವನ್ನ ಮುಗಿಸುತ್ತಿದೆ. ಇದೇ ಮೊದಲ ಬಾರಿಗೆ ಅಪ್ಪು ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು , ರಚಿತಾ ರಾಮ್ ನಾಯಕಿಯಾಗಿದ್ದಾರೆ.     

short by Pawan / more at Vahini Tv

Comments