Skip to main content


ಬಿಡುಗಡೆಯಾದ ಪತಂಜಲಿ ಸಿಮ್! ವಿಶೇಷತೆ ಏನು ಗೊತ್ತಾ?

ಯೋಗಗುರು ಬಾಬಾ ರಾಮ್ದೇವ್ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಬಾಬಾ ರಾಮ್ದೇವ್ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಪತಂಜಲಿ ಆಯುರ್ವೇದ ಹಾಗೂ ಬಿಎಸ್ಎನ್ಎಲ್ ಜಂಟಿಯಾಗಿ ಈ ಸಿಮ್ ಕಾರ್ಡ್ ಬಿಡುಗಡೆ ಮಾಡಿದೆ.

ಸದ್ಯ ಈ ಸಿಮ್ ನೌಕರರಿಗೆ ಮಾತ್ರ ಲಭ್ಯವಿದೆ. 144 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಬಳಕೆದಾರರಿಗೆ 2 ಜಿಬಿ ಡೇಟಾ ಹಾಗೂ ಅನಿಯಮಿತ ಕಾಲಿಂಗ್ ಸೇವೆ ಸಿಗಲಿದೆ. ಇದ್ರ ಜೊತೆಗೆ ಪತಂಜಲಿ ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ನೀಡಲಿದೆ.

ನೌಕರರಿಗೆ ಮಾತ್ರ ಲಭ್ಯವಿರುವ ಈ ಸಿಮ್ ಸದ್ಯದಲ್ಲಿಯೇ ಉಳಿದ ಗ್ರಾಹಕರಿಗೂ ಹಂಚಿಕೆಯಾಗಲಿದೆ. ಡೇಟಾ, ಎಸ್ಎಂಎಸ್ ಜೊತೆ ಪತಂಜಲಿ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ರಿಯಾಯಿತಿ ಗ್ರಾಹಕರಿಗೆ ಸಿಗಲಿದೆ.     

short by Pawan / more at Kannadadunia

Comments