Skip to main content


ರನ್‌ಗಾಗಿ ಯುವರಾಜ್ ಸಿಂಗ್ ಪರದಾಟ

ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತೊಮ್ಮೆ ರನ್ ಬರ ಎದುರಿಸುತ್ತಿದ್ದಾರೆ. ಇದೀಗ ನಡೆಯುತ್ತಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 7 ಪಂದ್ಯಗಳಲ್ಲಿ 12.80 ಸರಾಸರಿಯಂತೆ ಕೇವಲ 64 ರನ್ ಗಳಿಸಿದ್ದಾರೆ. ಒಂದೊಮ್ಮೆ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಆಗಿ ಮಿಂಚಿದ್ದ ಯುವರಾಜ್ ಸಿಂಗ್ ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20 ಸೇರಿದಂತೆ ಯಾವುದೇ ಕ್ರಿಕೆಟ್‌ಗೂ ಸೈ ಎನಿಸಿಕೊಂಡಿದ್ದರು. ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧ ಯುವರಾಜ್ ಸಿಂಗ್ 14 ಎಸೆತಗಳಲ್ಲಿ 14 ರನ್ (1ಸಿಕ್ಸರ್) ಗಳಿಸಿದ್ದರು. ಯುವರಾಜ್ ಸಿಂಗ್ 2018ರ ಆವೃತ್ತಿಯಲ್ಲಿ ಆಡಿರುವ 7 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. 12.80 ಸರಾಸರಿ ರನ್ ದಾಖಲಿಸಿದ್ದಾರೆ. ಸ್ಟ್ರೇಕ್‌ರೇಟ್ 91.42 ಮತ್ತು ವೈಯಕ್ತಿಕ ಗರಿಷ್ಠ ಸ್ಕೋರ್ 20 ರನ್ ಆಗಿದೆ. ಕಳೆದ ವರ್ಷ ಆಟಗಾರರ ಹರಾಜು ವೇಳೆ ಯುವರಾಜ್ ಸಿಂಗ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 2 ಕೋಟಿ ರೂ.ಗೆ ಖರೀದಿಸಿತ್ತು. ಅವರ ಕಳಪೆ ಪ್ರದರ್ಶನ ಇದೀಗ ಪಂಜಾಬ್ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಇನ್ನು ಉಳಿದಿರುವ ಪಂದ್ಯಗಳಲ್ಲಿ ಅವರಿಗೆ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುವುದೇ ಕಾದು ನೋಡಬೇಕಾಗಿದೆ.            

short by Prajwal / more at Varthabharathi

Comments