Skip to main content


ಕಾಂಗ್ರೆಸ್ ಶಾಸಕರನ್ನು ಹೊರಗೆ ಬಿಟ್ರೆ ಆಗೋದೇ ಬೇರೆ: ಅಮಿತ್ ಷಾ

ಯಡಿಯೂರಪ್ಪ ರಾಜೀನಾಮೆ ನಂತ್ರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಕಿಡಿಕಾರಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ, ಕರ್ನಾಟಕದಲ್ಲಿ ಜನತೆ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಅದೇ ಕಾರಣಕ್ಕೆ ನಾವು ಸರ್ಕಾರ ರಚನೆಗೆ ಮುಂದಾಗಿದ್ದೆವು ಎಂದು ಹೇಳಿದ್ದಾರೆ. ಬಿಜೆಪಿ ಕುದುರೆ ವ್ಯಾಪಾರ ಮಾಡ್ತಿದೆ ಎಂದು ಕಾಂಗ್ರೆಸ್ ಸುಳ್ಳು ಆರೋಪ ಹೊರಿಸುತ್ತಿದೆ. ಕಾಂಗ್ರೆಸ್ ಅಸಂವಿಧಾನಿಕವಾಗಿ ಶಾಸಕರನ್ನು ಹೊಟೇಲ್ ನಲ್ಲಿ ಕೂಡಿ ಹಾಕಿದೆ. ಕಾಂಗ್ರೆಸ್ ಈಗ್ಲೂ ಶಾಸಕರನ್ನು ಹಿಡಿದಿಟ್ಟುಕೊಂಡಿದೆ. ಅವ್ರು ಹೊರ ಬಂದಾಗ ಜನತೆಯೇ ಅವ್ರನ್ನು ಪ್ರಶ್ನೆ ಮಾಡಲಿದ್ದಾರೆ ಎಂದು ಅಮಿತ್ ಷಾ ಹೇಳಿದ್ದಾರೆ.      

short by Pawan / more at Kannadadunia

Comments