Skip to main content


ಮತ್ತೊಮ್ಮೆ ರಿಚ್ಚಿಯಾಗಲಿರುವ ರಕ್ಷಿತ್!!

'ಉಳಿದವರು ಕಂಡಂತೆ' ಚಿತ್ರವನ್ನು ಕಂಡವರಿಗೆ ರಿಚ್ಚಿಯಾಗಿ ರಕ್ಷಿತ್ ಶೆಟ್ಟಿ ಅಭಿನಯ ಖಂಡಿತವಾಗಿಯೂ ಅವರ ನೆನಪಿನಿಂದ ಮಾಸಿಹೋಗದು. 'ಶೂಟ್‌ಮಾಡ್ಲಾ' ಎನ್ನುವ ಅವರ ಪಂಚಿಂಗ್ ಡೈಲಾಗ್ ಹಾಗೂ ಹುಲಿವೇಷದ ನೃತ್ಯವನ್ನು ಚಿತ್ರಪ್ರೇಮಿಗಳು ಈಗ ಕೂಡಾ ನೆನಪಿಸಿಕೊಳ್ಳುತ್ತಾರೆ. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ರಕ್ಷಿತ್ ಉಳಿದವರು ಕಂಡಂತೆ ಚಿತ್ರದ ಮುಂದುವರಿದ ಭಾಗವನ್ನು ನಿರ್ಮಿಸಲು ರೆಡಿಯಾಗುತ್ತಿದ್ದಾರೆ. ಉಳಿದವರು ಕಂಡಂತೆ ಚಿತ್ರದ ರಿಚ್ಚಿ ಪಾತ್ರ ಇಲ್ಲೂ ಮುಂದುವರಿಯಲಿದ್ದು, ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಲಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಹೆಚ್ಚು ಕಮ್ಮಿ ಉಳಿದವರು ಕಂಡಂತೆ ಚಿತ್ರದ ತಾರಾಗಣವೇ ಮುಂದುವರಿಯಲಿದೆ. ಆದರೆ ಉಳಿದವರು ಕಂಡಂತೆ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸಿದ್ದರು. ಆದರೆ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ ಹೊಣೆ ಹೊರದೆ, ಕೇವಲ ಅಭಿನಯಿಸಲಿದ್ದಾರೆ. ಬದಲಿಗೆ ನಿರ್ದೇಶನದ ಹೊಣೆಯನ್ನು ಅವರು ಕಿರಿಕ್ ಪಾರ್ಟಿಖ್ಯಾತಿಯ ರಿಷಭ್ ಶೆಟ್ಟಿಗೆ ವಹಿಸಿದ್ದಾರೆ. ಉಳಿದವರು ಕಂಡಂತೆ ಚಿತ್ರದಲ್ಲಿ ರಿಷಬ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 

short by Prajwal / more at Varthabharathi

Comments