Skip to main content


ಮನ ಕಲಕುತ್ತೆ ಈ ಹುಡುಗಿಯ ದುರಂತ ಸಾವು

10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಬಾಲಕಿ ತನ್ನ ಕುಟುಂಬದೊಂದಿಗೆ ದ್ವಾರಕಾದಲ್ಲಿ ವಾಸಿಸುತ್ತಿದ್ದಳು, ಆಟೋಮೊಬೈಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯ ತಂದೆಗೆ ಕೆಲ ದಿನಗಳ ಹಿಂದಷ್ಟೇ ಶಸ್ತ್ರ ಚಿಕಿತ್ಸೆ ನಡೆದಿತ್ತು. ಹೀಗಾಗಿ ಆತ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಕೆಲಸಕ್ಕೂ ಹೋಗದ ಕಾರಣ ಕುಟುಂಬ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿತ್ತು. ಬ್ಯಾಂಕ್ ನಲ್ಲಿ ಸ್ವಲ್ಪ ಹಣ ಇಟ್ಟುಕೊಂಡಿದ್ದ ಬಾಲಕಿಯ ತಂದೆ, ಸೋಮವಾರದಂದು ಮಗಳ ಕೈಗೆ ಎಟಿಎಂ ಕಾರ್ಡ್ ನೀಡಿ 6 ಸಾವಿರ ರೂ. ಡ್ರಾ ಮಾಡಿಕೊಂಡು ಬರುವಂತೆ ತಿಳಿಸಿದ್ದಾರೆ. ಮನೆಯಲ್ಲಿದ್ದ ಬಾಲಕಿ ತಂದೆಯ ಮೊಬೈಲ್ ಗೆ ಇಷ್ಟು ಮೊತ್ತದ ಹಣ ಡ್ರಾ ಆಗಿರುವ ಮೆಸೇಜ್ ಬಂದಾಗ ಗಾಬರಿಗೊಳಗಾಗಿದ್ದಾರೆ.

ಅದರಂತೆ ಬಾಲಕಿ ಮನೆ ಸಮೀಪದಲ್ಲೇ ಇದ್ದ ಎಟಿಎಂ ಗೆ ಹೋಗಿ 6 ಸಾವಿರ ಡ್ರಾ ಮಾಡಿದ್ದಾಳೆ. ಆಗ ಹಿಂದೆ ನಿಂತಿದ್ದ ಇಬ್ಬರು, ಬಾಲಕಿಗೆ ರಶೀದಿ ಬರಬೇಕೆಂದರೆ ಮತ್ತೊಮ್ಮೆ ಎಟಿಎಂ ಕಾರ್ಡ್ ಹಾಕುವಂತೆ ತಿಳಿಸಿದ್ದು, ಅವರು ಹೇಳಿದಂತೆ ಮಾಡಿದ ಬಾಲಕಿ ಬಳಿಕ ಮನೆಗೆ ತೆರಳಿದ್ದಾಳೆ. ಆಗ ಈ ಇಬ್ಬರು ಖದೀಮರು ಬಾಲಕಿಯ ತಂದೆಯ ಖಾತೆಯಿಂದ ಸುಮಾರು 29 ಸಾವಿರ ರೂ. ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ದೂರು ನೀಡಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ತನ್ನ ತಪ್ಪಿನಿಂದಾಗಿ ಕುಟುಂಬ ಸಂಕಷ್ಟ ಎದುರಿಸುವಂತಾಯಿತಲ್ಲ ಎಂಬ ಕೊರಗಿನಿಂದ ಬಾಲಕಿ ದುಡುಕಿನ ನಿರ್ಧಾರ ಕೈಗೊಂಡಿದ್ದು, ಮನೆಯಲ್ಲೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.  

short by Pawan / more at Kannadadunia

Comments