Skip to main content


ಸುದೀಪ್​ ಪ್ರಚಾರಕ್ಕೆ ಬರುವ ಮುನ್ನ ಬೆದರಿದ ಶ್ರೀರಾಮುಲು? ಕಿಚ್ಚನಿಗೆ ಹೇಳಿದ್ದೇನು ಗೊತ್ತಾ?

ಸುದೀಪ್​ ಅವರ ಚಿತ್ರಗಳನ್ನು ನೋಡುತ್ತೇವೆ ಹಾಗೂ ಗಮನಿಸುತ್ತೇವೆ. ಅವರ ಅಭಿಮಾನಿಗಳು ಹಾಗೂ ನಮ್ಮ ಸಮಾಜದವರಾದ ಸುದೀಪ್​ ನನಗೆ ಬೆಂಬಲ ನೀಡಬೇಕು ಹೀಗಂತ ಶ್ರೀರಾಮಲು ಅವರು ಮೇ 7ರಂದು ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಟ ಸುದೀಪ್​ ಪ್ರಚಾರ ನಡೆಸುವ ಹಿನ್ನೆಲೆಯಲ್ಲಿ ಮನವಿ ಮಾಡಿಕೊಂಡರು. ಇದೇ ವೇಳೆ ಅವರು ಮಾತನಾಡಿ ಬಾದಾಮಿಯಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಕದನವಿದೆ. ಸತ್ಯ ಮತ್ತು ಧರ್ಮ ರಾಮುಲು ಕಡೆ ಇದೆ. ಅಧರ್ಮ ಮತ್ತು ಹಿಂಸೆ ಸಿದ್ದರಾಮಯ್ಯ ಅವರ ಪರ ಇದೆ. ಹೀಗಾಗಿ ಸಿದ್ದರಾಮಯ್ಯ ಸೋಲುತ್ತಾರೆ ಎಂದು ಶ್ರೀರಾಮುಲು ಭವಿಷ್ಯ ನುಡಿದರು.         

short by Pawan / more at Kannada News Now

Comments