Skip to main content


ಕೇಂದ್ರದ ಸುಪರ್ದಿಗೆ ತಿರುಪತಿ ದೇವಸ್ಥಾನ?

ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನವೆಂದು ಗುರುತಿಸಲಾಗುವ ತಿರುಪತಿಯ ತಿರುಮಲ ದೇವಸ್ಥಾನ ಮತ್ತು ಅದರ ಅಧೀನ ದೇವಸ್ಥಾನಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಮುಂದಾಗಿದೆ. ಈ ದೇವಸ್ಥಾನಗಳ ಐತಿಹಾಸಿಕ ಸ್ವರೂಪ ಮತ್ತು ಪ್ರಾಚೀನತೆ ಸಂರಕ್ಷಿಸಲು ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. 'ದೇವಸ್ಥಾನಗಳ ಸಂರಕ್ಷಣೆಗೆ ಅನುಸರಿಸಬೇಕಾಗಿರುವ ಕ್ರಮಗಳ ಬಗ್ಗೆ ಅಗತ್ಯ ಮಾಹಿತಿ ಮತ್ತು ಛಾಯಾಚಿತ್ರ ಒದಗಿಸಬೇಕು ಮತ್ತು ಈ ಕೆಲಸದಲ್ಲಿ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು' ಎಂದು ಇಲಾಖೆಯ ಸೂಪರಿಂಟೆಂಡೆಂಟ್‌ ಅವರು ಮೇ 4ರಂದು ಟಿಟಿಡಿಯ ಅಮರಾವತಿಯ ವಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ. 'ಎನ್‌ಡಿಎದಿಂದ ಹೊರಬಂದಿರುವ ಚಂದ್ರಬಾಬು ನಾಯ್ಡು ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪ್ರಧಾನಿ ಮೋದಿ ಈ ದೇವಸ್ಥಾನವನ್ನು ಕೇಂದ್ರ ಸರ್ಕಾರದ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸತ್ತಿದ್ದಾರೆ' ಎಂದು ತೆಲುಗುದೇಶಂ ಹಿರಿಯ ಮುಖಂಡರೊಬ್ಬರು ಆರೋಪಿಸಿದ್ದಾರೆ.          

short by Prajwal / more at Prajavani

Comments