Skip to main content


ಮೊದಲ ಬಾರಿಗೆ ಮಹಾದಾಯಿ ವಿಷಯದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

ಗೋವಾದ ಜೀವನದಿಯಾಗಿರುವ ಮಾಂಡೋವಿ-ಮಹದಾಯಿ ನೀರು ಹಂಚಿಕೆ ವಿವಾದ ಕಳೆದ ಮೂರು ದಶಕದಿಂದ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯ ರೀತಿ ರಾಜ್ಯದ ಜನತೆಯನ್ನು ಕಾಡುತ್ತಿದೆ. ಈ ನಡುವೆ ಇಂದು ಪ್ರಧಾನಿ ಮೋದಿ ಅವರು ಈ ಬಗ್ಗೆ ಮೊದಲ ಬಾರಿಗೆ ಮತ್ತೆ ಮಹಾದಾಯಿ ವಿಚಾರವನ್ನು ರಾಜಕೀಯಕ್ಕೆ ಮಾತ್ರ ಸೀಮೀತ ಮಾಡಿ ವಿರೋಧ (ಕಾಂಗ್ರೆಸ್) ಪಕ್ಷದವರ ಹೆಗಲ ಮೇಲೆ ಪ್ರಧಾನಿ ಮೋದಿ ಹಾಕಿದ್ದಾರೆ. ಹೌದು, ಪ್ರಧಾನಿ ಮೋದಿ ಅವರು ಗದಗದಲ್ಲಿ ನಡೆಯುತ್ತಿರುವ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದರು. 2007ರ ಗೋವಾ ಚುನಾವಣೆಯ ಸಲುವಾಗಿ ಮಂಡಗಾವ್ ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆಯಲ್ಲಿ ಸೋನಿಯಾಗಾಂಧಿ ಅವರು ಒಂದು ಸ್ವಲ್ಪ ನೀರನ್ನು ಕೂಡ ಕರ್ನಾಟಕಕ್ಕೆ ಬಿಡುವುದಿಲ್ಲ ಅಂತ ಹೇಳಿದ್ದೀರಿ. ಈಗ ನೀವು ಕರ್ನಾಟಕಕ್ಕೆ ಬಂದು ಇಲ್ಲಿನ ಜನರನ್ನು ದಾರಿ ತಪ್ಪಿಸುತ್ತಿದ್ದೀರಿ ಅಂತ ಹೇಳಿದರು. ಇದೇ ವೇಳೆ ಅವರು ಮಾತನಾಡಿ ಮಹದಾಯಿ ನೀರು ಹಂಚಿಕೆ ಮಾಡುವುದರ ಬಗ್ಗೆ ಮೊದಲು ನೀವು ನಿಮ್ಮ ಪಕ್ಷದ ನಾಯಕರುಗಳ, ಶಾಸಕರ ಅಭಿಪ್ರಾಯವನ್ನು ತಿಳಿಸಿ ಅಂತ ಹೇಳಿದರು.          

short by NP / more at Kannada News Now

Comments