Skip to main content


ಮಂಡ್ಯದ ಗಂಡು ಅಂಬರೀಶ್ ಗೆ ಇಂದು ೬೬ನೇ ಹುಟ್ಟುಹಬ್ಬದ ಸಂಭ್ರಮ

ರೆಬಲ್‍ಸ್ಟಾರ್ ಅಂಬರೀಶ್‍ಗೆ ಇವತ್ತು 66ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾತ್ರಿಯಿಂದಲೇ ಅಂಬಿ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅಂಬರೀಶ್, ಅಭಿಮಾನಿಗಳ ಪ್ರೀತಿ ಹಾರೈಕೆಯಿಂದ ನಾನು ಬೆಳೆದಿದ್ದೆನೆ. ಅವರ ಖುಷಿ ನನ್ನ ಖುಷಿ. 49 ವರ್ಷ ಚಿತ್ರರಂಗದಲ್ಲಿದ್ದು ಅವರನ್ನು ರಂಜಿಸಿದ್ದೇನೆ. ನನ್ನ ಮಗನನ್ನು ಅವರಿಗೆ ಒಪ್ಪಿಸಿದ್ದೇನೆ ಎಂದರು. ಇಂದು ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರತಂಡ ಹೊಸ ಮೇಕಿಂಗ್‍ನ್ನ ರಿಲೀಸ್ ಮಾಡಿದ್ದು ಇದನ್ನ ಅಂಬಿಗೆ ಡೆಡಿಕೇಟ್ ಮಾಡಿದೆ.

short by Shraman Jain / more at Public TV