Skip to main content


ರಾಹುಲ್ ಬ್ಯಾಟಿಂಗ್ ಅಬ್ಬರಕ್ಕೆ ಶರಣಾಯ್ತು ರಾಯಲ್ಸ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೆಎಲ್ ರಾಹುಲ್ ಬ್ಯಾಟಿಂಗ್ ಆರ್ಭಟಕ್ಕೆ ರಾಜಸ್ಥಾನ್ ರಾಯಲ್ಸ್ ತಲೆ ಬಾಗಿದೆ. ರವಿವಾರ ನಡೆದ ಐಪಿಎಲ್ 38ನೇ ಸೆಣಸಾಟದಲ್ಲಿ ಪಂಜಾಬ್ ತಂಡ ರಾಜಸ್ಥಾನ್ ವಿರುದ್ಧ 6 ವಿಕೆಟ್ ಗೆಲುವು ದಾಖಲಿಸಿದೆ. ರಾಜಸ್ಥಾನ್ ನೀಡಿದ್ದ 153 ರನ್ ಗುರಿ ಬೆನ್ನಟ್ಟಿದ ಪಂಜಾಬ್ 18.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 155 ರನ್ ಕಲೆ ಹಾಕುವುದರೊಂದಿಗೆ ರಾಜಸ್ಥಾನ್ ಗೆ ಸೋಲುಣಿಸಿತು. ರಾಜಸ್ಥಾನ್ ತಂಡದ ಪರ ಆರಂಭಿಕರಾಗಿ ಇಳಿದ ಬಟ್ಲರ್ 39 ಎಸೆತಗಳನ್ನು ಎದುರಿಸಿ 51 ರನ್ ಪೇರಿಸಿದರು. ಸಂಜು ಸ್ಯಾಮ್ಸನ್ 28 (23), ಬೆನ್ ಸ್ಟೋಕ್ 12 (9), ರಾಹುಲ್ ತ್ರಿಪಾಠಿ 11 (13), ಶ್ರೇಯಸ್ ಗೋಪಾಲ್ 24 (16) ರನ್ ಕೊಡುಗೆ ಬಿಟ್ಟರೆ ಉಳಿದೆಲ್ಲ ರಾಜಸ್ಥಾನ್ ಆಟಗಾರರೂ 6ರೊಳಗಿನ ರನ್ ನೊಂದಿಗೆ ನಿರ್ಗಮಿಸಿ ಕೆಟ್ಟ ಬ್ಯಾಟಿಂಗ್ ಗೆ ಸಾಕ್ಷಿ ಹೇಳಿದರು. ಚೇಸಿಂಗ್ ಗೆ ಇಳಿದ ಪಂಜಾಬ್ ನಿಂದಲೂ ಅಂಥದ್ದೇನೂ ಬ್ಯಾಟಿಂಗ್ ಆರ್ಭಟ ಕಂಡು ಬರಲಿಲ್ಲ.  ಆದರೆ ಆರಂಭಿಕರಾಗಿ ಇಳಿದಿದ್ದ ಕೆಎಲ್ ರಾಹುಲ್ 84 (54) ಒಬ್ಬರೇ ಪಂಜಾಬ್ ಪರ ಕೊಸರಾಡಿದರು. ರಾಹುಲ್ ನೊಂದಿಗೆ ಜೊತೆಯಾಗಿ ನಿಂತ ಮರ್ಕ್ಯುಸ್ ಸ್ಟಾಯ್ನ್ಸ್ 23/16 ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಿದರು.             

short by Prajwal / more at myKhel 

Comments