Skip to main content


ದ್ವಿತೀಯ ಪಿಯು ತರಗತಿಗಳ ಆರಂಭ ಇಂದಿನಿಂದ: ಉಪನ್ಯಾಸಕರಿಂದ ಬಹಿಷ್ಕಾರದ ಎಚ್ಚರಿಕೆ

ಉಪನ್ಯಾಸಕರಿಂದ ತರಗತಿಗಳ ಬಹಿಷ್ಕಾರದ ಎಚ್ಚರಿಕೆ ನಡುವೆಯೂ ದ್ವಿತೀಯ ಪಿಯುಸಿ ತರಗತಿಗಳು ಮೇ 2ರಿಂದ ಆರಂಭವಾಗಲಿವೆ. ಇದೇ ಮೊದಲ ಬಾರಿಗೆ ಬೇಸಿಗೆ ರಜೆಯನ್ನು ಕಡಿತಗೊಳಿಸಿ ತರಗತಿಗಳನ್ನು ಮುನ್ನವೇ ಆರಂಭಿಸಲಾಗುತ್ತಿದೆ. ''ಮೇ 2ರಂದು ಪಿಯುಸಿ ತರಗತಿಗಳನ್ನು ಆರಂಭಿಸಿದರೆ ನಾವು ಬಹಿಷ್ಕರಿಸಲು ನಿರ್ಧರಿಸಿದ್ದೇವೆ'' ಎಂದು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ 'ವಿಕ'ಕ್ಕೆ ತಿಳಿಸಿದ್ದಾರೆ. ''ಏ. 30ರಂದು ನಡೆದ ಸಾಂಕೇತಿಕ ಪ್ರತಿಭಟನೆ ವೇಳೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ 24ರಿಂದ ತರಗತಿಗಳನ್ನು ಆರಂಭಿಸುವಂತೆ ಕೋರಿದೆವು. ಅದಕ್ಕೆ 20ರಿಂದಲೇ ಆರಂಭಿಸವುದಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಒಪ್ಪಿಗೆ ಪಡೆಯುವ ಭರವಸೆ ನೀಡಿದ್ದರು. ಆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ತರಗತಿಗಳನ್ನು ಬಹಿಷ್ಕರಿಸುತ್ತೇವೆ'' ಎಂದು ಅವರು ತಿಳಿಸಿದರು.         

short by Pawan / more at Vijayakarnataka

Comments