Skip to main content


ಆನ್ ಲೈನ್ ಸಾಮ್ರಾಜ್ಯದ ರಾಣಿ ಆದ ಈ ಪೋರಿ ಯಾರು?

ಕಳೆದ ಎರಡು ವಾರಗಳಲ್ಲಿ ಆನ್ ಲೈನ್ ದುನಿಯಾದಲ್ಲಿ ಇವಳದ್ದೇ ಕಾರು ಬಾರು. ಯಾರದ್ದೇ ವಾಟ್ಸ್ ಆಪ್, ಫೇಸ್ ಬುಕ್ ಸ್ಟೇಟಸ್ ನೋಡಿದ್ರು ಈಕೆಯೇ ಕಾಣುತ್ತಾಳೆ. ಕನ್ನಡ ಸಿನಿಮಾ ಡೈಲಾಗ್ ಡಬ್ ಸ್ಮ್ಯಾಶ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೆಟ್ ಮಾಡಿರುವ ಈಕೆ ಹೆಸರು ಪ್ರಶ್ವಿತಾ. ಏಳು ವರ್ಷದ ಪ್ರಶ್ವಿತಾ ತಾನೇ ಮಾಡಿರುವ ಡಬ್ ಸ್ಮ್ಯಾಶ್ ಗಳಿಂದ ಸಖತ್ ಫೇಮಸ್ ಆಗುತ್ತಿದ್ದಾರೆ. ಪ್ರಶ್ವಿತಾ ಇಷ್ಟು ಅದ್ಬುತವಾಗಿ ಡಬ್ ಸ್ಮ್ಯಾಶ್ ಮಾಡುವುದಕ್ಕೆ ಕಾರಣ ಆಕೆಯ ಸಹೋದರಿ ಭೂಮಿಕಾ. ಕಳೆದ ಆರು ತಿಂಗಳಿಂದ ಡಬ್ ಸ್ಮ್ಯಾಶ್ ಮಾಡುವುದಕ್ಕೆ ಶುರು ಮಾಡಿದ್ದು ಇತ್ತೀಚಿಗಷ್ಟೇ ಇನ್‌ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡುವುದಕ್ಕೆ ಆರಂಭಿಸಿದ್ದಾರೆ. ಪ್ರಶ್ವಿತಾ ಮೂಲತಃ ಬೆಂಗಳೂರಿನ ನಾಗರಬಾವಿಯ ನಿವಾಸಿ ಹರಿಕೃಷ್ಣ ಹಾಗೂ ಜೀವಿತಾ ಅವರ ಪುತ್ರಿ. ಸದ್ಯ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕ್ಟಿಂಗ್ ನಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಪ್ರಶ್ವಿತಾ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್ ಕೂಡ ಇದ್ದು ಅದರಲ್ಲಿ 11 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಅದಷ್ಟೇ ಅಲ್ಲದೆ ನಟಿ ಮಾನ್ವಿತಾ ಹರೀಶ್ ಹಾಗೂ ರಶ್ಮಿಕಾ ಮಂದಣ್ಣ ಪಶ್ವಿತಾ ಅವರ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.      

short by Pawan / more at Filmibeat

Comments