Skip to main content


ಆಲಿಯಾ-ರಣಬೀರ್ ಶಾದಿ?

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿ ಇತ್ತೀಚೆಗೆ ಹೆಚ್ಚು ಸುದ್ದಿ ಮಾಡುತ್ತಿದೆ. ಅದಕ್ಕೆ ‘ಬ್ರಹ್ಮಾಸ್ತ್ರ’ ಚಿತ್ರ ಕಾರಣವಾಗಿದ್ದರೂ, ಅವರಿಬ್ಬರ ನಡುವೆ ಪ್ರೀತಿ ಇದೆ ಎಂಬ ವಿಚಾರದ ಪಾಲು ದೊಡ್ಡದಿದೆ. ಈಗ ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ಟ್ವೀಟ್ ಮಾಡಿದ್ದಾರೆ ರಣಬೀರ್ ತಂದೆ ರಿಷಿ ಕಪೂರ್! ಈ ಟ್ವೀಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ!

‘ಮಹೇಶ್ ಭಟ್, ಮುಕೇಶ್ ಭಟ್, ರಾಬಿನ್ ಭಟ್, ಪೂರ್ಣಿಮಾ, ಸೋನಿ ಭಟ್, ಪೂಜಾ ಭಟ್, ಇಮ್ರಾನ್ ಹಶ್ಮಿ, ಆಲಿಯಾ ಭಟ್ ಹೀಗೆ ಭಟ್ ಕುಟುಂಬದ ಸದಸ್ಯರು ಹಾಗೂ ಸಂಬಂಧಿಗಳ ಜತೆ ನಾನು ಕೆಲಸ ಮಾಡಿದ್ದೇನೆ. ಎಲ್ಲರಿಗೂ ಧನ್ಯವಾದ!’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ನೋಡಿ ಅಭಿಮಾನಿಗಳು ಖುಷಿ ಪಟ್ಟುಕೊಳ್ಳುವ ವೇಳೆಗೆ ಆಲಿಯಾ ಅದನ್ನು ರಿಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ,‘ನಾವು ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುವ ಭರವಸೆ ಇದೆ. ಆದರೆ, ಈ ಬಾರಿ ಎಲ್ಲರೂ ಸೇರಿ ಕೆಲಸ ಮಾಡೋಣ’ ಎಂದಿದ್ದಾರೆ.   

short by Pawan / more at Vijayavani

Comments