Skip to main content


ಯಡಿಯೂರಪ್ಪ ವಿಶ್ವಾಸ ಮತ ಯಾಚನೆ ಮಾಡದೇ ರಾಜೀನಾಮೆ ಏಕೆ ನೀಡಿದ್ರು ಗೊತ್ತಾ..!

ಹೊಸದೊಂದು ಚರ್ಚೆ ರಾಜಕೀಯ ಮುತ್ಸದಿಗಳಲ್ಲಿ ಶುರುವಾಗಿದೆ. ಇದಕ್ಕೂ ಮುನ್ನಾ ಬಹಳದಿನಗಳ ಕಾಲ ಅಪಮೈತ್ರಿ ಸರಕಾರ ಉಳಿಯುವುದಿಲ್ಲ ಅಂತ ಬಿಜೆಪಿಯ ಮುಖಂಡರು ಹೇಳಿದ್ರೆ ಇತ್ತ ಶ್ರೀರಾಮುಲು ಸರಕಾರಕ್ಕೆ ನಿದ್ದೆ ಮಾಡುವುದಕ್ಕೆ ಬಿಡಲ್ಲ ಎಂಬ ವಿಷಯಗಳನ್ನು ಮನದಲ್ಲಿ ವಿಶ್ಲೇಷಿಸಿದರೆ ಒಂದು ಸ್ಪಷ್ಟ ವಿಚಾರ ಬರುತ್ತದೆ. ಅದು ಏನಪ್ಪ ಅಂದ್ರೆ ಒಮ್ಮೆ ವಿಶ್ವಾಸ ಮತ ಯಾಚನೆ ಮಾಡಿದರೆ ಮತ್ತೆ ಆ ಪಕ್ಷಕ್ಕೆ ರಾಜ್ಯಪಾಲರು ಮತ ಯಾಚನೆಗೆ ಕರೆಯಲು ಸಾಧ್ಯವಿಲ್ಲವಂತೆ. ಹಾಗಾಗಿಯೇ ಯಡಿಯೂರಪ್ಪನವರು ವಿಶ್ವಾಸ ಮತ ಯಾಚನೆ ಮಾಡದೇ ರಾಜೀನಾಮೆ ನೀಡಿದ್ದಾರೆ.  ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರ ಕ್ಕೆ ಆಪರೇಷನ್ ಕಮಲದ ಭೀತಿ ಇರುವುದರಿಂದ ಈಗ ಸರಕಾರ ಮಾಡಿದ್ರು ಸಹ ದೋಸ್ತಿ ಸರಕಾರ ಬಹಳ ದಿನಗಳ ಕಾಲ ನಡೆಯುವುದಿಲ್ಲ. ಮತ್ತೆ ಸರಕಾರ ರಚನೆಗೆ ಬಿಜೆಪಿ ಮುಂದಾದ್ರೆ ಆಗ ವಿಶ್ವಾಸ ಮತಯಾಚನೆಗೆ ಅನುಕೂಲವಾಗುತ್ತದೆ ಎಂಬ ವಾದ ಹಾಗಾಗಿ ಯಡಿಯೂರಪ್ಪರು ವಿಶ್ವಾಸ ಮತಯಾಚನೆ ಮಾಡದೇ, ರಾಜೀನಾಮೆ ನೀಡಿದ್ದಾರಂತೆ.

short by Nithin / more at Bisisuddi


Comments