Skip to main content


ಬಹುಮತ ಸಾಬೀತು ಪರೀಕ್ಷೆಯಲ್ಲಿ ಗೆದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

ಸದನದಲ್ಲಿ ಸಿ.ಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬಹುಮತ ಸಾಬೀತು ಮಾಡುವ ಮುನ್ನ ಮಾತನಾಡಿದ್ದ ರೈತರ ಸಾಲಮನ್ನಾ ಮಾಡ್ತೀವಿ ಅಂತ ಹೇಳಿದ್ದೀರಿ ಜನರೆಲ್ಲಾ ಪ್ರತಿಭಟನೆ ಮಾಡಲು ಬಿಜೆಪಿ ಸಹಕಾರವನ್ನು ಕೇಳುತ್ತಿದ್ದಾರೆ, ನೀವು ರೈತರ ಸಾಲಮನ್ನಾ ವನ್ನು ಮಾಡದೇ ಹೋದರೆ ಇದೇ ಸೋಮವಾರ ಇಡೀ ರಾಜ್ಯಾದ್ಯಂತ ಸ್ವಯಂ ಘೋಷಿತ ಬಂದ್​ ಆಗಲಿದೆ ಅಂತ ಹೇಳಿದ ಅವರು ವಿಶ್ವಾಸಮತ ಸಾಭೀತು ಪಡಿಸುವ ಪ್ರಕ್ರಿಯೆಗೆ ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿ ಸದನದಿಂದ ಬಿಎಸ್ವೈ ಹೊರ ನಡೆದರು. ಇದೇ ವೇಳೆ ನೂತನ ಸ್ಪೀಕರ್ ಅವರು ಹೆಚ್.ಡಿ ಕುಮಾರ್ ಸ್ವಾಮಿ ಅವರ ಸದನದಲ್ಲಿ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ಸದನದಲ್ಲಿ ಶಾಸಕರನ್ನು ಕೇಳಿಕೊಂಡ ವೇಳೆಯಲ್ಲಿ ಕುಮಾರ ಸ್ವಾಮಿ ಅವರ ಪರವಾಗಿ, ಒಟ್ಟು 117 ಶಾಸಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಿಶ್ರ ಸರ್ಕಾರದ ಪರ ಹೌದು, ಅಂತ ಹೇಳುವುದರ ಮೂಲಕ ಸಿ.ಎಂ ಹೆಚ್.ಡಿ. ಕುಮಾರ ಸ್ವಾಮಿ ಅವರು ಸದನದಲ್ಲಿ ಮಂಡಿಸಿದ್ದ ವಿಶ್ವಾಸ ಮತ ಯಾಚನೆಗೆ ಬೆಂಬಲ ವ್ಯಕ್ತಪಡಿಸಿದರು.       

short by Pawan / more at Kannada News Now

Comments