Skip to main content


ಯಾವುದೇ ಪಕ್ಷದ ಪ್ರಚಾರಕ ಅಲ್ಲ: ಸುದೀಪ್‌

"ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷದ ಪರವೂ ತಾವು ಪ್ರಚಾರ ನಡೆಸುತ್ತಿಲ್ಲ. ಆದರೆ ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಸ್ನೇಹಿತರಾಗಿದ್ದು, ಅವರ ಪರ ಪ್ರಚಾರ ಮಾಡುತ್ತಿರುವೆ' ಎಂದು ಚಿತ್ರನಟ ಸುದೀಪ್‌ ಹೇಳಿದರು.

ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರವಾಗಿ ಸೋಮವಾರ ಗ್ರಾಮದಲ್ಲಿ ರೋಡ್‌ ಶೋ ನಡೆಸಿ ಮತ ಯಾಚಿಸಿದ ಅವರು, "ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಾನು ಯಾವ ಪಕ್ಷದ ಪರವಾಗಿಯೂ ಪ್ರಚಾರದಲ್ಲಿ ತೊಡಗಿಲ್ಲ. ಶ್ರೀರಾಮುಲು ನನ್ನ ಸ್ನೇಹಿತರಾಗಿದ್ದು, ಅವರಿಂದ ಮೊಳಕಾಲ್ಮೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯವಿದೆ. ಈ ಕಾರಣಕ್ಕೆ ಅವರ ಪರವಾಗಿ ಪ್ರಚಾರ ಮಾಡಲು ಬಂದಿದ್ದೇನೆಯೇ ವಿನಃ ನಾನು ಯಾವುದೇ ಪಕ್ಷದ ಕ್ಯಾಂಪೇನರ್‌ ಅಲ್ಲ' ಎಂದು ಸ್ಪಷ್ಟಪಡಿಸಿದರು.               

short by NP / more at Udayavani

Comments