Skip to main content


ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ, ಪ್ರಮುಖಾಂಶಗಳು ಹೀಗಿವೆ ಓದಿ

ರಾಜ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇಂದು ರಾಜ್ಯ ಬಿಜೆಪಿ ಕೂಡ ಚುನಾವಣಾ ಪ್ರಣಾಳಿಕೆಯನ್ನು ಶಾಸಕ ಸುರೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅಳೆದು ತೂಗಿ ತಯಾರು ಮಾಡಿದ್ದ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ.

ಇನ್ನು ಬಿಡುಗಡೆಯಾಗಿರುವ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು ಹೀಗಿವೆ ಓದಿ :

* ಅಧಿಕಾರಕ್ಕೆ ಬಂದ 24 ಗಂಟೆಯೊಗಳಗೆ ರೈತರ ಸಾಲಮನ್ನ 

* ರಾಷ್ಟ್ರೀಕೃತ ಸಾಲಗಳ ಸಾಲಮನ್ನ 

*ಬಿಪಿಎಲ್ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ಉಚಿತ ತಾಳಿ 

* ಭ್ಯಾಗ್ಯ ಲಕ್ಷ್ಮಿ ಬಾಂಡ್ 1 ಲಕ್ಷದಿಂದ 2 ಲಕ್ಷಕ್ಕೆ ಏರಿಕೆ 

* 1 ಲಕ್ಷದ ವರೆಗೆ ರೈತರ ಬೆಳೆ ಸಾಲ 

* 1 ಲಕ್ಷದ ವರೆಗೆ ರೈತರ ಬೆಳೆ ಸಾಲ 

* ನೀರಾವರಿಗಾಗಿ ಒಂದು ಕೋಟಿ ಮೀಸಲು 

* ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿ 

* 1 ರಿಂದ 10ನೇ ತರಗತಿಯವರೆಗೆ ಉಚಿತ ಉಪಹಾರ ಯೋಜನೆ 

* ರೈತರಿಗೆ ಎರಡು ಲಕ್ಷದವರೆಗೆ ಆರೋಗ್ಯ ವಿಮೆ 

* ನೇಕಾರರ ಸಾಲ ಮನ್ನಾ 

* ಮಂಗಳೂರಿನಲ್ಲಿ ಎನ್ ಎ ಐ ಸ್ಥಾಪನೆ 

* ವಾಲ್ಮೀಕಿ ಯೋಜನೆಯಡಿಯಲ್ಲಿ ವಿದೇಶದಲ್ಲಿ ವ್ಯಾಸಂಗ 

* ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ಎಸಿಬಿ ರದ್ದು, ಲೋಕಾಯುಕ್ತಕ್ಕೆ ಹೆಚ್ಚು ಬಲ 

* 1.5ಲಕ್ಷ ಕೋಟಿ ನೀರಾವರಿಗಾಗಿ ಮೀಸಲು 

* ಎಲ್ಲ ಕೆರೆಗಳ ಪುನಶ್ಚೇತನಕ್ಕೆ ಕಲ್ಯಾಣ ಯೋಜನೆ

* ಪ್ರತಿನಿತ್ಯ 10ಗಂಟೆ ರೈತರಿಗೆ ವಿದ್ಯುತ್ 

* ಗೋ ಹತ್ಯೆ ನಿಷೇಧ ಕಾಯ್ದೆ 2012ಕ್ಕೆ ಮರು ಜೀವ 

* ಗೋ ಹತ್ಯಾ ನಿಷೇಧ ನಿಗಮ ಘೋಷಣೆ 

* ಸ್ತ್ರೀ ಶಕ್ತಿ ಸಂಘಗಳಿಗೆ ಶೇ.1 ಬಡ್ಡಿ ದರದಲ್ಲಿ 2 ಲಕ್ಷದ ವರೆಗೆ ಸಾಲ 

* ಅನ್ನಪೂರ್ಣ ಕ್ಯಾಂಟೀನ್ ನಿರ್ಮಾಣ 

*ಜಿಲ್ಲಾ ಕೇಂದ್ರದಲ್ಲಿ ಎರಡು, ತಾಲೂಕಿನಲ್ಲಿ ಒಂದು ಅನ್ನಪೂರ್ಣ ಕ್ಯಾಂಟೀನ್ 

* ​ಮದಕರಿ ಹೆಸರಿನಲ್ಲಿ ವಾಲ್ಮೀಕಿ ಸಮುದಾಯದ ಏಳಿಗೆಗೆ ಹಾಗೂ ವಸತಿ ಯೋಜನೆಗೆ 6500ಕೋಟಿ‌ ರೂ. ಮೀಸಲು 

* ವಿವಾಹ ಮಂಗಳ ಯೋಜನೆಯಡಿ ಎರಡು ಗ್ರಾಂ ಚಿನ್ನದ ತಾಳಿ 

* ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಈ ಅವಕಾಶ 

* ಉದ್ಯೋಗ ಸೃಷ್ಟಿ 2000 ಕೋಟಿ 

* ಪ್ರತಿ ತಾಲೂಕಿನಲ್ಲಿ ಸ್ಪೋರ್ಟ್ಸ್​ ಟ್ರ್ಯಾಕ್ ನಿರ್ಮಾಣ 

* ಬಿಪಿಎಲ್ ದಾರರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯ ವಿತರಣೆ *ಪ್ರತಿ ಮನೆಗೆ ಸೌಭಾಗ್ಯ ಯೋಜನೆಯಡಿ ವಿದ್ಯುತ್ 

* ಕೊಳಚೆ ಪ್ರದೇಶ‌ ನಿರ್ಮೂಲನೆಗೆ ಯೋಜನೆ 

* ಬೆಂಗಳೂರನ್ನ ವಿಶ್ವದರ್ಜೆ ನಗರ ಮಾಡಲು ಕಟಿಬದ್ದ 

* ಎಲ್ಲ ಬಡಾವಣೆಗಳಿಗೆ ಮೆಟ್ರೋ ವಿಸ್ತರಣೆ 

* ನೇಕಾರರ ಒಂದು ಲಕ್ಷದ ವರೆಗಿನ ಸಾಲ ಮನ್ನಾ.

short by: Nithin / more at Kannadanewsnow

Comments