Skip to main content


ಬಿಜೆಪಿ ಪ್ರಣಾಳಿಕೆ ಪಟ್ಟಿಯಲ್ಲಿ ಏನೇನಿದೆ ಗೊತ್ತಾ..?

ಸಂಸದ ಸುರೇಶ ಅಂಗಡಿ ಅವರು ಗ್ರಾಮೀಣ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಜಿಲ್ಲೆಗೆ ಸಂಬಂಧಪಟ್ಟಂತೆ ಒಟ್ಟು ಇಪ್ಪತ್ತೆಳು ಅಂಶಗಳೊಂದಿಗೆ ತಯಾರಿಸಲಾದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಸರಕು ಸಾಗಾಣಿಕೆ ವಿಮಾನ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು, ತಾಲೂಕಿಗೊಂದು ಸೋಲಾರ ಹಬ್ ನಿರ್ಮಾಣ, ಜಿಲ್ಲೆಯಲ್ಲಿ ಬೆಲ್ಲ ಸಂಶೋಧನಾ ಮತ್ತು ತರಬೇತಿ ಕೇಂದ್ರ ಸ್ಥಾಪನೆ, ಕಳಸಾ ಬಂಡೂರಿ ಮತ್ತು ಮಹಾದಾಯಿ ಮಲಪ್ರಭಾ ಜೋಡಣೆ, ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರತಿ ತಾಲೂಕಿಗೊಂದು ಹಣ್ಣು ಮತ್ತು ತರಕಾರಿ ಸಂಗ್ರಹಕ್ಕೆ ಶೀತಲಗೃಹಗಳ ನಿರ್ಮಾಣ, ಸೇರಿದಂತೆ ನಗರದಲ್ಲಿ ರಿಂಗ ರೋಡ್ ನಿರ್ಮಾಣ ಹಾಗೂ ಬೆಳಗಾವಿ ಧಾರವಾಡ ಕಿತ್ತೂರ ಮಾರ್ಗವಾಗಿ ಜೋಡುರೈಲು ಮಾರ್ಗ ನಿರ್ಮಾಣಕ್ಕೆ ಒತ್ತಾಯಿಸುವ ಬಗ್ಗೆ ಪ್ರಮುಖ ಅಂಶಗಳು ಚುನಾವಣಾ ಪ್ರಣಾಳಿಕೆ ಪಟ್ಟಿಯಲ್ಲಿ ಪ್ರಮುಖ ಅಂಶಗಳು ಅಳವಡಿಸಲಾಗಿದೆ.       

short by Pawan / more at Webdunia

Comments