Skip to main content


ಸಿಎಂ ಆದ ಬೆನ್ನಲ್ಲೇ ಎಚ್‍ಡಿಕೆಗೆ ಬೆಟ್ಟದಷ್ಟು ಸವಾಲುಗಳು!

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಎಚ್‍ಡಿ ಕುಮಾರಸ್ವಾಮಿಯವರಿಗೆ ಸ್ವಕ್ಷೇತ್ರ ರಾಮನಗರದಲ್ಲಿ ಬೆಟ್ಟದಷ್ಟು ಸವಾಲುಗಳು ಎದುರಾಗಿವೆ. ರೇಷ್ಮೆನಗರಿ ರಾಮನಗರ ಹಾಗೂ ಬೊಂಬೆನಗರಿ ಚನ್ನಪಟ್ಟಣ ಇವೆರಡೂ ಕೂಡ ಅವಳಿ ನಗರಗಳು. ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿದ್ದು, ಬೆಂಗಳೂರು -ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಅಕ್ಕಪಕ್ಕದಲ್ಲಿಯೇ ಇರುವ ಈ ಎರಡು ನಗರಗಳು ದಿನದಿಂದ ದಿನ ಬೆಳೆಯುತ್ತಿವೆ. ಅಷ್ಟೆ ಅಲ್ಲದೇ ರಾಜ್ಯ ರಾಜಕಾರಣದಲ್ಲೂ ಕೂಡ ಸಾಕಷ್ಟು ಹೆಸರು ಮಾಡಿವೆ. ಇಂತಹ ಎರಡು ಕ್ಷೇತ್ರಗಳಿಂದ ಕುಮಾರಸ್ವಾಮಿ ಅವರು ಸ್ವರ್ಧಿಸಿ ಗೆಲುವು ಸಾಧಿಸಿ, ಇದೀಗ ರಾಮನಗರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ಕ್ಷೇತ್ರವನ್ನ ಉಳಿಸಿಕೊಂಡಿದ್ದಾರೆ. ಎರಡು ಕ್ಷೇತ್ರಗಳಲ್ಲೂ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿವೆ. ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರೋ ರಾಜೀವ್ ಗಾಂಧಿ ಆರೋಗ್ಯ ವಿವಿಯ ಕಟ್ಟಡ ಕಾಮಗಾರಿ, ಹತ್ತಾರು ವರ್ಷದಿಂದ ಬಂದ್ ಆಗಿರುವ ಕೆಎಸ್‍ಐಸಿಯ ಸಿಲ್ಕ್ ಮಿಲ್‍ನ್ನು ಪುನಃ ಆರಂಭಿಸಬೇಕಿದೆ. ವಿವಿ ಪ್ರಾರಂಭವಾದರೆ ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗೆ ಪರಿಹಾರ ಕೂಡ ಸಿಗಲಿದೆ.    

short by Pawan / more at Public Tv

Comments